ಬೆಂಗಳೂರು, ಮಾ.12-ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ತಕ್ಷಣದಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ನಗರದ ಎಲ್ಲಾ ವಾರ್ಡ್ಗಳಲ್ಲಿರುವ ಜನಪ್ರತಿನಿಧಿಗಳ ಹೆಸರಿರುವ ನಾಮಫಲಕಗಳನ್ನು ಮುಚ್ಚುವ ಕಾರ್ಯ ಬಿರುಸಿನಿಂದ ಸಾಗಿದೆ.
ನಗರದ ಎಲ್ಲಾ ವಾರ್ಡ್ಗಳಲ್ಲಿರುವ ಕುಡಿಯುವ ನೀರಿನ ಘಟಕ, ಬಸ್ನಿಲ್ದಾಣ ಸೇರಿದಂತೆ ಮತ್ತಿತರೆಡೆ ಅಳವಡಿಸಲಾಗಿರುವ ಶಾಸಕರು, ಕಾರ್ಪೋರಟಾರ್ಗಳ ಹೆಸರು, ದೂರವಾಣಿ ಸಂಖ್ಯೆಗಳುಳ್ಳ ನಾಮಫಲಕಗಳಿಗೂ ಸಹ ಹಾಗೂ ಪ್ರಮುಖ ಜನಪ್ರತಿನಿಧಿಗಳ ನಾಮಫಲಕಗಳಿಗೂ ಸಹ ಚುನಾವಣಾ ಸಿಬ್ಬಂದಿಗಳು ಸ್ಟಿಕ್ಕರ್ಗಳನ್ನು ಅಂಟಿಸುತ್ತಿದ್ದಾರೆ.
ಮುಂದಿನ 24 ಗಂಟೆಯೊಳಗೆ ನಗರದಲ್ಲಿರುವ ಎಲ್ಲಾ ಜನಪ್ರತಿನಿಧಿಗಳ ಭಾವಚಿತ್ರ ಮತ್ತು ಹೆಸರುಗಳಿಗೆ ಸಂಪೂರ್ಣವಾಗಿ ಸ್ಟಿಕ್ಕರ್ ಅಂಟಿಸಲಾಗುವುದು.
ಇನ್ನು ಅಡ್ಡರಸ್ತೆಗಳ ಮಾರ್ಗಸೂಚಿ ಸೂಚಿಸುವ ನಾಮಫಲಕಗಳಲ್ಲೂ ಸಹ ಸ್ಟಿಕ್ಕರ್ಗಳನ್ನು ಅಂಟಿಸಲಾಗುತ್ತಿದೆ. ಚುನಾವಣೆ ಮುಗಿದು, ಫಲಿತಾಂಶ ಬಂದ ನಂತರವಷ್ಟೇ ಇವುಗಳನ್ನು ತೆರವುಗೊಳಿಸಲಾಗುವುದು.