ಬೆಂಗಳೂರು: ಭಾರತದ ಚುನಾವಣಾ ಆಯೋಗವು ಮುಂಬರುವ ಲೋಕಸಭೆ ಚುಣಾವಣೆಗಾಗಿ ನಾಗರಿಕರಿಗೆ ‘ಸಿವಿಜಿಲ್‘ ಅಪ್ಲಿಕೇಷನ್ ಅನ್ನು ಪರಿಚಯಿಸುತ್ತಿದೆ. ಚುನಾವಣಾ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ನೀತಿ ಸಂಹಿತೆ ಉಲ್ಲಘಿಂಸುವ ಜನಪ್ರತಿನಿಧಿಗಳ ಮಾಹಿತಿಯನ್ನು ಕಲೆಹಾಕುವ ಉದ್ದೇಶ ಇದಾಗಿದೆ.
ಲೋಕಸಭಾ ಚುನಾವಣೆ ಕುರಿತು ಚುನಾವಣಾ ಆಯೋಗ ‘ಸಿವಿಜಿಲ್ ನಾಗರಿಕ ಅಪ್ಲಿಕೇಶನ್‘ ಅನ್ನು ವೃದ್ಧಿಸುತ್ತಿದೆ. ‘ಸಿವಿಜಿಲ್ ಆ್ಯಪ್‘ ಚುನಾವಣೆಯ ವೇಳೆ ನಡೆಯುವ ದುರಾಚಾರ ಕುರಿತ ಮಾಹಿತಿಯನ್ನು ಈ ಅಪ್ಲಿಕೇಶನ್ನಲ್ಲಿ ಕಳುಹಿಸಬಹುದು‘‘ ಎಂದು ಮುಖ್ಯ ಚುನಾವಣಾ ಅಧಿಕಾರಿ ಸುನಿಲ್ ಆರೋರಾ ಹೇಳಿದ್ದಾರೆ.
ಚುನಾವಣೆಯ ಕುರಿತಂತೆ ಜನಪ್ರತಿನಿಧಿಗಳು ನೀತಿಸಂಹಿತೆ ಉಲ್ಲಂಘಿಸಿದರೆ ನಾಗರಿಕರು ನಿಮಿಷಾರ್ಧದಲ್ಲೇ ಸಾಕ್ಷಿ ಸಮೇತ ಇದರಿಂದ ದೂರು ನೀಡಬಹುದು.
ನಾಗರಿಕರು ನೀತಿ ಸಂಹಿತೆ ಕುರಿತಾಗಿ ಫೋಟೊ, ರೆಕಾರ್ಡ್ ಅಥವಾ ವಿಡಿಯೋವನ್ನು 2 ನಿಮಿಷಗಳಲ್ಲಿ ಸಿವಿಜಿಲ್ ಆ್ಯಪ್ ಮೂಲಕ ಕಳುಹಿಸಬಹುದಾಗಿದೆ.
ಇನ್ನು ಸಿವಿಜಿಲ್ ಆ್ಯಪ್ನಲ್ಲಿ ಲೊಕೇಷನ್ ಮ್ಯಾಪ್ ಅಳವಡಿಸಲಾಗಿದ್ದು, ಗಿಯೊಗ್ರಾಫಿಕ್ ಇನ್ಫಾರ್ಮೇಷನ್ ಸಿಸ್ಟಮ್ ನಿಂದ ಕಾರ್ಯನಿರ್ವಹಿಸುತ್ತದೆ. ನಾಗರಿಕ ಕಳುಹಿಸದ ಮಾಹಿತಿಯನ್ನು ಪರಿಗಣಿಸುವ ‘ಸಿವಿಜಿಲ್ ಆ್ಯಪ್‘ ಆತನಿಗೆ ನಿರ್ದಿಷ್ಟ ಗುರುತಿನ ಕಾರ್ಡ್ ಮತ್ತು ನೀತಿ ಸಂಹಿತೆ ಉಲ್ಲಂಘಿಸುವ ಜನಪ್ರತಿನಿಧಿಗಳ ಮಾಹಿತಿಯನ್ನು ರವಾನಿಸುವಂತೆ ಕೋರುತ್ತದೆ. ಮಾತ್ರವಲ್ಲದೆ, ನಾಗರಿಕ ಕಳುಹಿಸಿದ ದೂರನ್ನು ಗೌಪ್ಯವಾಗಿಡುತ್ತದೆ.
‘ಸಿವಿಜಿಲ್ ಆ್ಯಪ್‘ ಅನ್ನು ದುರುಪಯೋಗ ಪಡಿಸದಂತೆ ಆ್ಯಪ್ನಲ್ಲಿ ಇನ್ಬ್ಯುಲ್ಟ್ ಫೀಚರ್ ಅನ್ನು ಅಳವಡಿಸಲಾಗಿದೆ. ಅಲ್ಲದೆ ಇದರಲ್ಲಿ ಚುನಾವಣಾ ನೀತಿ ಸಂಹಿತೆ ಮತ್ತು ಕಾನೂನು ಉಲ್ಲಂಘನೆಯ ದೂರುಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಇನ್ನು ‘ಸಿವಿಜನ್ ಅಪ್ಲಿಕೇಶನ್‘ ಬಳಸುವ ನಾಗರಿಕರಿಗೆ 5 ನಿಮಿಷಗಳ ಕಾಲ ಘಟನೆ ಕುರಿತಾಗಿ ಮಾಹಿತಿ ನೀಡಲು ಸಮಯ ನೀಡುತ್ತದೆ. ಅನಂತರ ಫೋಟೊ ಅಥವಾ ವಿಡಿಯೋವನ್ನು ಪ್ರಕಟಿಸಲು ಅವಕಾಶ ನೀಡಲಾಗಿದೆ. ಪ್ರಮುಖ ವಿಷಯ ಎಂದರೆ ಈ ಆ್ಯಪ್ ಯಾವುದೇ ಹಳೇಯ ಫೋಟೊ ಮತ್ತು ವಿಡಿಯೋವನ್ನು ಅಪ್ಲೋಡ್ ಮಾಡದಂತೆ ತಡೆಯುತ್ತದೆ.