ಬೋಯಿಂಗ್​ ವಿಮಾನ ದುರಂತ: ಭಾರತೀಯ ಪರಿಸರ ಇಲಾಖೆ ಅಧಿಕಾರಿ ಸಾವು

ಅಡೀಸ್ಅಬಾಬಾ: 157 ಪ್ರಯಾಣಿಕರ ಸಾವಿಗೆ ಕಾರಣವಾದ ಬೋಯಿಂಗ್​ ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಸಾವಿಗೀಡಾಗಿದ್ದು, ಈ ಪೈಕಿ ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಸಲಹೆಗಾರರಾಗಿದ್ದ ಶಿಖಾ ಗರ್ಗ್​ ಕೂಡ ಮೃತಪಟ್ಟಿದ್ದಾರೆ.

ಪರಿಸರ ಮತ್ತು ಅರಣ್ಯ ಸಚುವಾಲಯದಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತಿದ್ದ ಶಿಖಾ ಗರ್ಗ್​ ನೈರೋಬಿಯಾದಲ್ಲಿ ನಡೆಯುತಿದ್ದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(UNEP)ದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು ಎಂದು ಸುಶ್ಮಾ ಸ್ವರಾಜ್​ ತಿಳಿಸಿದ್ದಾರೆ.

ಸುದ್ದಿ ತಿಳಿಯುತಿದ್ದಂತೆ ಪರಿಸರ ಖಾತೆ ಸಚಿವ ಡಾ. ಹರ್ಷವರ್ಧನ್ ಅವರೂ ಕೂಡ​ ಟ್ವಿಟ್ಟರ್​ ಮೂಲಕ ಸಂತಾಪ ಸೂಚಿಸಿದ್ದಾರೆ.

ಅಡೀಸ್‌ ಅಬಾಬಾದಿಂದ 62 ಕಿ.ಮೀ. ದೂರದಲ್ಲಿರುವ ಬಿಶೋಫ್ತು ಎಂಬಲ್ಲಿ ವಿಮಾನ ಪತನಗೊಂಡಿದೆ. ‘ಅಡೀಸ್‌ ಅಬಾಬಾದಿಂದ ಸ್ಥಳೀಯ ಕಾಲಮಾನ 8.38ಕ್ಕೆ ಪ್ರಯಾಣ ಬೆಳೆಸಿದ್ದ ಬೋಯಿಂಗ್‌ 737 -800 ಮ್ಯಾಕ್ಸ್‌ ವಿಮಾನವು 8.44ರ ಸುಮಾರಿಗೆ ರಾಡಾರ್​ನಿಂದ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ದುರ್ಘ‌ಟನಾ ಸ್ಥಳದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ಭರದಿಂದ ಸಾಗಿದೆ’ ಎಂದು ಇಥಿಯೋಪಿಯನ್‌ ಏರ್​ಲೈನ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ