ಲೋಕಸಭೆ ಚುನಾವಣೆಗೆ ಇಂದಿನಿಂದಲೇ ನೀತಿ ಸಂಹಿತೆ ಜಾರಿ

ನವದೆಹಲಿ, ಮಾ.10-ಲೋಕಸಭೆ ಚುನಾವಣೆಗೆ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣಾ ಆಯೋಗ ಈ ಬಾರಿ ಅತ್ಯಂತ ಗಂಭೀರವಾಗಿ ನೀತಿ ಸಂಹಿತೆಯನ್ನುಜಾರಿಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ಸುನೀಲ್‍ ಅರೋರಾ ತಿಳಿಸಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣಕ್ರಮ ಜರುಗಿಸಲಾಗುತ್ತದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೂ ಧ್ವನಿವರ್ದಕ ಬಳಸುವಂತಿಲ್ಲ. ಪರಿಸರ ಸ್ನೇಹಿ ಪ್ರಚಾರ ಸಾಮಾಗ್ರಿಗಲನ್ನು ಬಳಸಬೇಕುಎಂದು ಹೇಳಿದರು.

ಮೊಬೈಲ್‍ನಲ್ಲಿದೂರು ಸಲ್ಲಿಕೆ:
ಬೆಂಗಳೂರಿನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿಪ್ರಾಯೋಗಿಕವಾಗಿ ಜಾರಿ ಮಾಡಿದ್ದ ಮೊಬೈಲ್‍ ಆಧಾರಿಸಿದ ದೂರು ವ್ಯವಸ್ಥೆಯನ್ನು ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಬಳಕೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಜಾರಿ ಮಾಡಿದದೂರು ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸುಮಾರು 28 ಸಾವಿರ ದೂರುಗಳು ಆಯೋಗಕ್ಕೆ ಬಂದಿದ್ದವು. ಹಣ ಹಂಚಿಕೆ ಸೇರಿದಂತೆ ವಿವಿಧ ಮಾಹಿತಿಗಳನ್ನು ನೀಡಿದವರ ಹೆಸರನ್ನುಗೌಪ್ಯವಾಗಿಡಲಾಗುವು.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ:
ಚುನಾವಣಾ ಆಭ್ಯರ್ಥಿಗಳು ಯಾವುದೇ ರೀತಿಯ ರಾಜಕೀಯ ಜಾಹಿರಾತು ನೀಡಬೇಕಾದರೂ ಚುನಾವಣಾ ಆಯೋಗದ ಪೂರ್ವಾನುಮತಿ ಪಡೆಯಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾವಹಿಸಲಾಗುವುದು. ಫೆಸ್‍ಬುಕ್, ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಜಾಹಿರಾತುಗಳನ್ನು ಪ್ರಕಟಿಸಬೇಕಾದರೂ ಆಯೋಗದ ಪೂರ್ವಾನುಮತಿ ಪಡೆಯಬೇಕು ಎಂದು ಹೇಳಿದರು.

ದ್ವೇಷದ ಭಾಷಣ ಮತ್ತು ವದ್ಧಂತಿಗಳ ವಿರುದ್ಧ ಸ್ಥಳೀಯ ಅಧಿಕಾರಿಗಳು ಕಠಿಣಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ದೋಸ್ತಿ ಸರ್ಕಾರ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿಎಂದೇ ಹೇಳಲಾಗಿರುವ 28 ಲೋಕಸಭೆ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ.

ಏಪ್ರಿಲ್18 ರಂದು ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಹಾಗೂ ಏಪ್ರಿಲ್ 23ರಂದು ಎರಡನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಅಧಿಸೂಚನೆ. ಮೊದಲ ಹಂತ ಎರಡನೆ ಹಂತ 23
ನಾಮಪತ್ರ ಸಲ್ಲಿಕೆಆರಂಭ ಮಾ.19 ಮಾ.28
ನಾಮ ಪತ್ರ ಸಲ್ಲಿಕೆಕೊನೆಯ ದಿನ ಮಾ.26 ಏ.4
ನಾಮ ಪತ್ರ ಪರಿಶೀಲನೆ ಮಾ.27 ಏ.5
ನಾಮಪತ್ರ ಹಿಂಪಡೆಯಲು ಕೊನೆ ದಿನ ಮಾ.29 ಏ.8

ಕಾಂಗ್ರೆಸ್, ಜೆಡಿಎಸ್ ಮಿತ್ರಕೂಟ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಮಹಾ ಸಮರವೆಂದೇ ಈ ಚುನಾವಣೆಯನ್ನು ಹೇಳಲಾಗುತ್ತಿದೆ. ಆಡಳಿತ ಪಕ್ಷವಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಮರ ಸಿದ್ಧತೆ ಮಾಡಿಕೊಂಡಿವೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಇತ್ತೀಚೆಗೆ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಬಳ್ಳಾರಿ ಸೇರಿ ಕಾಂಗ್ರೆಸ್ 10 ಕ್ಷೇತ್ರಗಳನ್ನು ಗೆದ್ದಂತಾಗಿದೆ. ಒಟ್ಟು ಎರಡು ಪಕ್ಷಗಳು 16ನೇ ಲೋಕಸಭೆ ಕೊನೆಗೊಳ್ಳುವ ವೇಳೆಗೆ 12 ಮಂದಿ ಸಂಸದರನ್ನು ಹೊಂದಿತ್ತು.

ಬಿಜೆಪಿ ಕಳೆದ ಚುನಾವಣೆಯಲ್ಲಿ17 ಸ್ಥಾನಗಳಲ್ಲಿ ಗೆದ್ದಿತ್ತು. ಬಳ್ಳಾರಿ ಕ್ಷೇತ್ರದಲ್ಲಿ ಸೋಲು ಕಂಡ ನಂತರ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಅನಂತಕುಮಾರ್‍ ಅವರ ಅಕಾಲಿಕ ನಿಧನದಿಂದ ಬಿಜೆಪಿ 15 ಸಂಸದರನ್ನು ಹೊಂದಿದೆ. ಮುಂದಿನ ಚುನಾವಣೆಯಲ್ಲಿಕನಿಷ್ಠ 25 ಕ್ಷೇತ್ರಗಳಲ್ಲಿ ಗೆಲ್ಲಲ್ಲು ಬಿಜೆಪಿ ರಣತಂತ್ರ ರೂಪಿಸಿದೆ.

ಚುನಾವಣೆ ನಡೆಯುವ ಕ್ಷೇತ್ರಗಳು
ಮೊದಲ ಹಂತದ ಕ್ಷೇತ್ರಗಳು ಎರಡನೇ ಹಂತದ ಕ್ಷೇತ್ರಗಳು
ಬಾಗಲಕೋಟೆ
ಬೆಂಗಳೂರು ಕೇಂದ್ರ
ಬೆಂಗಳೂರು ಉತ್ತರ
ಬೆಂಗಳೂರು ಗ್ರಾಮಾಂತರ
ಬೆಂಗಳೂರು ದಕ್ಷಿಣ
ಬೆಳಗಾವಿ
ಬಳ್ಳಾರಿ (ಎಸ್‍ಟಿ)
ಬೀದರ್
ಬಿಜಾಪುರ (ಎಸ್‍ಸಿ)
ಚಾಮರಾಜನಗರ(ಎಸ್‍ಸಿ)
ಚಿಕ್ಕಬಳ್ಳಾಪುರ
ಚಿಕ್ಕೊಡಿ
ಚಿತ್ರದುರ್ಗ (ಎಸ್‍ಸಿ)
ದಕ್ಷಿಣಕನ್ನಡ
ದಾವಣಗೆರೆ
ಧಾರವಾಡ
ಕಲ್ಬುರ್ಗಿ (ಎಸ್‍ಸಿ)
ಹಾಸನ
ಹಾವೇರಿ
ಕೋಲಾರ (ಎಸ್‍ಸಿ)
ಕೊಪ್ಪಳ
ಮಂಡ್ಯ
ಮೈಸೂರು
ರಾಯಚೂರು (ಎಸ್‍ಟಿ)
ಶಿವಮೊಗ್ಗ
ತುಮಕೂರು
ಉಡುಪಿ ಚಿಕ್ಕಮಗಳೂರು
ಉತ್ತರಕನ್ನಡ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ