ಬೆಂಗಳೂರು,ಮಾ.11- ಕ್ಲಬ್‍ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಜೂಜಾಡುತ್ತಿದ್ದ 32 ಮಂದಿಯನ್ನು ಬಂಧಿಸಿ 1.52 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿ ಜಿಎನ್‍ಆರ್‍ಟಿ ಮ್ಯಾನ್‍ಸನ್, 3ನೇ ಮಹಡಿಯಲ್ಲಿನ ರೆಡ್‍ಮೌಂಟ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‍ನಲ್ಲಿ ಸದಸ್ಯರಲ್ಲದ ಕೆಲವರು ಸೇರಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಈ ಆಧಾರದ ಮೇಲೆ ಕ್ಲಬ್ ಮೇಲೆ ದಾಳಿ ಮಾಡಿದ ಪೊಲೀಸರು ಜೂಜಾಡುತ್ತಿದ್ದ 32 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 1,52,150 ರೂ. ವಶಪಡಿಸಿಕೊಂಡಿದ್ದಾರೆ.
ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.