ನಮ್ಮ ರಕ್ತ ಹರಿಸುತ್ತಿರುವ ಪಾಕಿಗಳಿಗೆ ನಾವೇಕೆ ನೀರು ಕೊಡಬೇಕು: ಕೇಂದ್ರ ಸಚಿವ ಅರ್ಜುನ್ ಮೇಘ್ವಾಲ್

ನವದೆಹಲಿ: ಪಾಕಿಸ್ತಾನಿಯರು ನಮ್ಮ ರಕ್ತ ಹರಿಸುತ್ತಿರುವಾಗ ಅಂತವರಿಗೆ ನಾವೇಕೆ ನೀರು ಕೊಡಬೇಕು ಎಂದು ಕೇಂದ್ರ ಸಚಿವ ಅರ್ಜುನ್ ಮೇಘ್ವಾಲ್ ಕಿಡಿಕಾರಿದ್ದಾರೆ.

ಪುಲ್ವಾಮಾ ಉಗ್ರರ ದಾಳಿ ಬಳಿಕ ಸಚಿವ ನಿತಿನ್ ಗಡ್ಕರಿ ಕೂಡ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ಉಗ್ರವಾದ ನಿಲ್ಲಿಸದಿದ್ದರೆ 1960ರ ಭಾರತ-ಪಾಕಿಸ್ತಾನ ನಡುವಿನ ಸಿಂಧೂ ನದಿ ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸಬೇಕಾಗುತ್ತದೆ. ಈ ಮೂಲಕ ಪಾಕಿಸ್ತಾನಕ್ಕೆ ಹೋಗುವ ನೀರನ್ನು ತಡೆಯುವ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ಕೇಂದ್ರ ಸಚಿವ ಅರ್ಜುನ್ ಮೇಘ್ವಾಲ್ ನಮ್ಮ ದೇಶಕ್ಕೆ ಸಂಬಂಧಿಸಿದ ನೀರು ಪಾಕಿಸ್ತಾನಕ್ಕೆ ಹೋಗದಂತೆ ತಡೆದು ಸಂಗ್ರಹಿಸಬೇಕು. ಈ ಮೂಲಕ ಸಿಂಧೂ ನದಿ ನೀರಿನ ಒಪ್ಪಂದವನ್ನು ಕೈಬಿಟ್ಟು, 5.3 ಲಕ್ಷ (0.53 ಮಿಲಿಯನ್) ಎಕರೆ ಅಡಿ ನೀರು ತಡೆಯುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಹೋಗುವ ನೀರನ್ನು ತಡೆದರೆ ಪಂಜಾಬ್ ಹಾಗೂ ರಾಜಸ್ಥಾನದ ಜನರಿಗೆ ಕುಡಿಯಲು ಪೂರೈಕೆ ಮಾಡಬಹುದು. ಇಲ್ಲವೇ ಕೃಷಿಗೆ ಬಳಕೆ ಮಾಡಿಕೊಳ್ಳಬಹುದು. ಸಂಗ್ರಹಿಸಿಟ್ಟ ನೀರಿನಿಂದ ಹೆಚ್ಚಿನ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಾಕ್‍ಗೆ ಪೂರೈಕೆಯಾಗುವ ನೀರನ್ನು ತಡೆಯುವ ಕ್ರಮಕೈಗೊಳ್ಳಲಿದೆ ಎಂದರು.

0.53 million acre-fee Indus water stopped’, says Arjun Meghwal

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ