ಇಂಡೋ- ಆಸಿಸ್ ನಾಲ್ಕನೆ ಏಕದಿನ ಪಂದ್ಯ:ನಾಲ್ಕು ಬದಲಾವಣೆ ಮಾಡಿದ್ರೆ ಆಸಿಸ್ ಉಡೀಸ್

ಮೊನ್ನೆ ಮೂರನೇ ಏಕದಿನ ಪಂದ್ಯದಲ್ಲಿ ಆಸಿಸ್ ವಿರುದ್ಧ ಸೋತು ಮಕಾಡೆ ಮಲಗಿದ್ದ ಟೀಂ ಇಂಡಿಯಾ ಇಂದು ಮೊಹಾಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿದೆ. ನಾಲ್ಕನೆ ಪಂದ್ಯದಲ್ಲಿ ತಂಡದಲ್ಲಿ ಬದಲಾವಣೆ ಮಾಡುತ್ತೇವೆ ಎಂದು ಕ್ಯಾಪ್ಟನ್ ಕೊಹ್ಲಿ ಸುಳಿವು ಕೊಟ್ಟಿದ್ರು. ಹೀಗಾಗಿ ಇಂದಿನ ಪಂದ್ಯದಲ್ಲಿ ಕೊಹ್ಲಿ ಈ ನಾಲ್ಕು ಬದಲಾವಣೆಗಳನ್ನ ಮಾಡಿದ್ರೆ ಬ್ಲೂ ಬಾಯ್ಸ್ ಇಂದು ಸರಣಿ ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ. ಹಾಗಾದ್ರೆ ಆ ನಾಲ್ಕು ಬದಲಾವಣೆಗಳೇನು ಅನ್ನೋದನ್ನ ತೋರಿಸ್ತಿವಿ ನೋಡಿ
ನಂ.1 :ಸ್ಪೀಡ್ಸ್ಟಾರ್ ಶಮಿ ಬದಲು ಭುವಿ ಕಣಕ್ಕಿಳಿಯಲಿ
ಇಂದು ಆಸಿಸ್ ವಿರುದ್ಧ ನಡೆಯುವ ನಾಲ್ಕನೆ ಏಕದಿನ ಪಂದ್ಯದಲ್ಲಿ ಆಸಿಸ್ ಬ್ಯಾಟ್ಸ್ಮನ್ಗಳಿಗೆ ಆರಂಭದಲ್ಲೆ ಶಾಕ್ ಕೊಡಬೇಕಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ Sಠಿeeಜ sಣಚಿಡಿ ಮೊಹ್ಮದ್ ಶಮಿ ಬದಲು ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಅವರನ್ನ ಕಣಕ್ಕಿಳಿಸಬೇಕಿದೆ. ಮೊನ್ನೆ ರಾಂಚಿ ಪಂದ್ಯದಲ್ಲಿ ಬೆಂಗಾಲಿ ಬೌಲರ್ ಮೊಹ್ಮದ್ ಶಮಿ ಹತ್ತು ಓವರ್ ಬೌಲಿಂಗ್ ಕಿuಣಚಿವನ್ನ ಪೂರ್ಣಗೊಳಿಸಿ 52 ರನ್ ಕೊಟ್ಟು ಕೇವಲ 1 ವಿಕೆಟ್ ಪಡೆದು ದುಬಾರಿ ಬೌಲರ್ ಆದ್ರು.
ಹೀಗಾಗಿ ಇಂದಿನ ಪಂದ್ಯದಲ್ಲಿ ಭುವಿಗೆ ಕ್ಯಾಪ್ಟನ್ ಕೊಹ್ಲಿ ಅವಕಾಶ ಕೊಟ್ಟು ನೋಡಬೇಕಿದೆ. ಎರಡು ತಿಂಗಳ ಹಿಂದೆ ಭುವನೇಶ್ವರ್ ಕುಮಾರ್ ಹೇಳಿಕೊಳ್ಳುವಂತಹ ಪರ್ಫಾಮನ್ಸ್ ಕೊಡದಿದ್ರು. ಆಸಿಸ್ ಗೆ ಆರಂಭದಲ್ಲೆ ಶಾಕ್ ಕೊಟ್ಟು ಡೆತ್ ಓವರ್ಗಳಲ್ಲಿ ಸೂಪರ್ ಸ್ಪೆಲ್ ಮಾಡಿ ಕಾಂಗರೂಗಳ ರನ್ ವೇಗಕ್ಕೆ ಕಡಿವಾಣ ಹಾಕಿದ್ರು. ಅದರಲ್ಲೂ ಆಸಿಸ್ ಕ್ಯಾಪ್ಟನ್ ಆ್ಯರಾನ್ ಫಿಂಚ್ ಅವರನ್ನ ಮೂರು ಬಾರಿಯೂ ಔಟ್ ಮಾಡಿ ತಂಡಕ್ಕೆ ಒಳ್ಳೆಯ ಓಪನಿಂಗ್ ಕೊಟ್ಟಿದ್ರು.
ನಂ.2 : ಶಿಖರ್ ಧವನ್ ಬದಲು ಕನ್ನಡಿಗ ರಾಹುಲ್ಗೆ ಚಾನ್ಸ್
ತಂಡದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಪರ್ಫಾಮನ್ಸ್ ಕೊಡುತ್ತಿದ್ದಾರೆ. ಧವನ್ಗೆ ಎಷ್ಟೆ ಚಾನ್ಸ್ ಕೊಟ್ರು ಆಡುತ್ತಿಲ್ಲ ಅನ್ನೋದಕ್ಕೆ ಆಡಿದ ಹತ್ತು ಇನ್ನಿಂಗ್ಸ್ಗಳಲ್ಲಿ ಕಲೆ ಹಾಕಿದ ರನ್ಗಳೇ ಹೇಳುತ್ತಿವೆ. ಸದ್ಯ ಈ ಡೆಲ್ಲಿ ಬ್ಯಾಟ್ಸ್ಮನ್ ಆಸಿಸ್ ವಿರುದ್ಧ ಆಡಿದ ಮೂರು ಪಂದ್ಯಗಳಿಂದ ಗಳಿಸಿದ್ದು ಕೇವಲ 22 ರನ್ಗಳಾಗಿವೆ. ಧವನ್ ಫ್ಲಾಪ್ ಪರ್ಫಾಮನ್ಸ್ನಿಂದಾಗಿ ತಂಡದ ಬ್ಯಾಟಿಂಗ್ ಲೈನ್ಅಪ್ ಮೇಲೆ ಭಾರೀ ಪರಿಣಾಮ ಬೀರುತ್ತಿದ್ದು ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ.
ಶಿಖರ್ ಧವನ್ ಅವರನ್ನ ಇಂದು ತಂಡದ ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಟ್ಟು ಭರ್ಜರಿ ಫಾರ್ಮ್ನಲ್ಲಿರುವ ಕ್ನನಡಿಗ ಕೆ.ಎಲ್. ರಾಹುಲ್ಗೆ ಮಣೆ ಹಾಕಬೇಕಿದೆ. ಮೊನ್ನೆ ಆಸಿಸ್ ವಿರುದ್ಧ ನಡೆದ ಟಿ20 ಸರಣಿ ಮೂಲಕ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದ ರಾಹುಲ್ ಎರಡು ಟಿ20 ಪಂದ್ಯಗಳಿಂದ 97 ರನ್ ಗಳಿಸಿದ್ರು.
ನಂ.3 : ಅಂಬಾಟಿ ರಾಯ್ಡು ಬದಲು ರಿಷಭ್ ಪಂತ್ ರಿಪ್ಲೇಸ್ ಮಾಡಿ
ಟೀಂ ಇಂಡಿಯಾ ಮತ್ತೆ ನಂ.4 ಸಮಸ್ಯೆ ಎದುರಿಸುತ್ತಿದೆ. ಇದಕ್ಕೆ ಕಾರಣ ನಂ 4ನಲ್ಲಿ ಆಡುತ್ತಿದ್ದ ಅಂಬಾಟಿ ರಾಯ್ಡು ಫ್ಲಾಪ್ ಆಗುತ್ತಿದ್ದಾರೆ. ಕಳೆದ ವರ್ಷ ಹೈದ್ರಾಬಾದ್ ಬ್ಯಾಟ್ಸ್ಮನ್ ಅಂಬಾಟಿ ರಾಯ್ಡು ನಂ.4ನಲ್ಲಿ ಸಾಲಿಡ್ ಬ್ಯಾಟಿಂಗ್ ಮಾಡಿದಾಗ ಕೊನೆಗೂ ಈ ಸ್ಲಾಟ್ಗೆ ಒಳ್ಳೆಯ ಬ್ಯಾಟ್ಸ್ಮನ್ ಸಿಕ್ಕಿತ್ತು ಅಂತಾ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ನಿಟ್ಟುಸಿರು ಬಿಟ್ಟಿತ್ತು. ಆದರೆ ಇತ್ತೀಚೆಗೆ ನಡೆದ ಆಸಿಸ್, ಕಿವೀಸ್ ಮತ್ತು ಈ ನಡೆಯುತ್ತಿರುವ ಏಕದಿನ ಸರಣಿಗಳಲ್ಲಿ ರಾಯ್ಡು ಬರೀ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ವಿಶ್ವಕಪ್ಗೂ ಮುನ್ನವೇ ತಂಡದಿಂದಲೇ ಗೇಟ್ ಪಾಸ್ ಪಡೆಯುವ ಮಟ್ಟಿಗೆ ಹೀನಾಯ ಪರಿಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಇವರ ಸ್ಥಾನದಲ್ಲಿ ರೈಸಿಂಗ್ ಸ್ಟಾರ್ ರಿಷಭ್ ಪಂತ್ ಆಡುವ ಸಾಧ್ಯತೆ ಇದೆ.
ನಂ.4 :ರವೀಂದ್ರ ಜಡೇಜಾ ಬದಲು ಸ್ಪಿನ್ನರ್ ಯಜ್ವಿಂದರ್ ಚಹಲ್ಗೆ ಚಾನ್ಸ್
ಮುಂಬರುವ ವಿಶ್ವಕಪ್ ನಲ್ಲಿ ಸ್ಥಾನ ಪಡೆಯಲು ಹೋರಾಟ ಮಾಡುತ್ತಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಸಿಕ್ಕ ಅವಕಾಶಗಳನ್ನ ಬಳಸಿಕೊಳ್ಳದೇ ಫ್ಲಾಪ್ ಆಗುತ್ತಿದ್ದಾರೆ. ಮೊನ್ನೆ ರಾಂಚಿ ಪಂದ್ಯದಲ್ಲಿ ಬೌಲಿಂಗ್ ಬ್ಯಾಟಿಂಗ್ ಎರಡರಲ್ಲೂ ಈ ಸೌರಾಷ್ಟ್ರ ಸ್ಟಾರ್ ಎಡವಿದ್ರು.  ಮ್ಯಾಚ್ ಚಿನ್ನರ್ ಆಗಬೇಕಿದ್ದ ಜಡ್ಡು ಸುಲಭವಾಗಿ ಪೆವಿಲಿಯನ್ ಸೇರಿ ತಂಡವನ್ನ ಗೆಲುವಿನ ದಡ ಸೇರಿಸಲ್ಲಿಲ್ಲ..
ಇಂದಿನ ಪಂದ್ಯದಲ್ಲಿ ಜಡ್ಡು ಬದಲಿಗೆ ರಿಸ್ಟ್ ಸ್ಪಿನ್ನರ್ ಯಜ್ವಿಂದರ್ ಚಹಲ್ಗೆ ಅವಕಾಶ ಕೊಡಬೇಕಿದೆ. ವಿಶ್ವಕಪ್ಗೂ ಮುನ್ನ ಯಜ್ವಿಂದರ್ ಚಹಲ್ ಕುಲ್ದೀಪ್ ಜೊತೆಗೂಡಿ ಸ್ಪಿನ್ ಮ್ಯಾಜಿಕ್ ಮಾಡಿ ಮ್ಯಾಚ್ ವಿನ್ನಿಂಗ್ ಪರ್ಫಾಮನ್ಸ್ ಕೊಡಬೇಕಿದೆ.
ಒಟ್ನಲ್ಲಿ ಆಸಿಸ್ ವಿರುದ್ಧ ಇಂದು ನಡೆಯುವ ಮಹತ್ವದ ಪಂದ್ಯದಲ್ಲಿ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಟೀಂ ಇಂಡಿಯಾ ಈ ನಾಲ್ಕು ಬದಲಾವಣೆಗಳನ್ನ ಮಾಡಿದ್ರೆ ತಂಡ ಗೆಲ್ಲೋದ್ರಿಲ್ಲಿ ಅನುಮಾನವೇ ಇಲ್ಲ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ