ಟೀಂ ಇಂಡಿಯಾದ ರೈಸಿಂಗ್ ಸ್ಟಾರ್ ರಿಷಭ್ ಪಂತ್ ಆಸಿಸ್ ವಿರುದ್ಧದ ಇಂದು ನಡೆಯುವ ನಾಲ್ಕನೆ ಮತ್ತು ಐದನೇ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ತಂಡದ ಮಿಸ್ಟರ್ ಕೂಲ್ ಎಂ.ಎಸ್.ಧೋನಿಗೆ ಆಸಿಸ್ ವಿರುದ್ಧದ ಕೊನೆಯ ಎರಡು ಪಂದ್ಯಗಳೀಗೆ ವಿಶ್ರಾಂತಿ ನೀಡಲಾಗಿದ್ದು ಮಾಹಿ ಸ್ಥಾನದಲ್ಲಿ ಮರಿ ಧೋನಿ ಧೋನಿ ಅಂತಾನೆ ಕರೆಸಿಕೊಂಡರುವ ರಿಷಭ್ ಪಂತ್ ಆಡಲಿದ್ದಾರೆ.
ರಿಷಭ್ ಆಡುವ ಬಗ್ಗೆ ಸುಳಿವು ನೀಡಿದ್ದ ಕ್ಯಾಪ್ಟನ್ ಕೊಹ್ಲಿ
ಮುಂದಿನ ಪಂದ್ಯಗಳಲ್ಲಿ ಕೆಲವು ಬದಲಾವಣೆಗಳನ್ನ ಮಾಡುತ್ತೇವೆ. ಆದರೆ ನಮ್ಮ ಹುಡುಗರು ಮ್ಯಾಚ್ ವಿನ್ನಿಂಗ್ ಪರ್ಫಾಮನ್ಸ್ ಕೊಡಬೇಕು. ಆಂಗ್ಲರ ನಾಡಿಗೆ ಫ್ಲೈಟ್ನಲ್ಲಿ ಹೋಗುವ ಮುನ್ನ ಟಾಪ್ ಫಾರ್ಮ್ನಲ್ಲಿರುವುದನ್ನ ನೋಡಬೇಕು. ಆಸಿಸ್ ವಿರುದ್ಧ ಉಳಿದಿರುವ ಎರಡು ಪಂದ್ಯಗಳಲ್ಲಿ ರಿಷಬ್ ಆಡುವ ಬಗ್ಗೆ ಕ್ಯಾಪ್ಟನ್ ಕೊಹ್ಲಿ ಸುಳಿವು ನೀಡಿದ್ರು.
ಇನ್ನು ಕೆಲವೇ ತಿಂಗಳಲ್ಲಿ ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಆಡಲು ರೈಸಿಂಗ್ ಸ್ಟಾರ್ ರಿಷಭ್ ಪಂತ್ ಆಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಕಾರಣಕ್ಕಾಗಿ ರಿಷಭ್ ಪಂತ್ಗೆ ಉಳಿದಿರುವ ಕೊನೆಯ ಎರಡು ಪಂದ್ಯಗಳಲ್ಲಿ ಆಡಲು ಅವಕಾಶ ಕೊಡಲಾಗಿದೆ.
ಆಸಿಸ್ ವಿರುದ್ಧ ಆಡುವ ಎರಡು ಪಂದ್ಯಗಳಲ್ಲಿ ಈ ಡೆಲ್ಲಿ ಡ್ಯಾಶರ್ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿ ಮ್ಯಾಚ್ ವಿನ್ನಿಂಗ್ ಪರ್ಫಾಮನ್ಸ್ ಕೊಟ್ಟರೇ ರಿಷಭ್ಗೆ ವಿಶ್ವಕಪ್ ಟಿಕೆಟ್ ಪಕ್ಕಾ ಆಗಲಿದೆ. ಹೀಗಾಗಿ ರಿಷಬ್ ಕಾಂಗರೂಗಳ ವಿರುದ್ಧ ಅಗ್ನಿ ಪರೀಕ್ಷೆಯನ್ನ ಎದುರಿಸಲಿದ್ದಾರೆ.
ತವರಿನಲ್ಲಿ ಕೊನೆಯ ಏಕದಿನ ಸರಣಿ ಆಡಿದ ಮಾಹಿ
ರಿಷಭ್ಗೆ ಪಂತ್ಗೆ ಸ್ಥಾನ ಬಿಟ್ಟುಕೊಟ್ಟು ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆಯುವ ಮೂಲಕ ಧೋನಿ ತವರಿನಲ್ಲಿ ಕೊನೆಯ ಏಕದಿನ ಸರಣಿ ಆಡಿದ್ದಾರೆ. ಇದರೊಂದಿಗೆ ಕ್ರಿಕೆಟ್ ಅಭಿಮಾನಿಗಳು ಧೋನಿಯನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ಧೊನಿಯನ್ನ ಇನ್ನು ವಿಶ್ವಕಪ್ನಲ್ಲಿ ಅಭಿಮಾನಿಗಳು ಕೊನೆಯ ಬಾರಿಗೆ ನೋಡಲಿದ್ದಾರೆ.
ಆಸಿಸ್ ವಿರುದ್ಧ ಫ್ಲಾಪ್ ಶೋ ಕೊಟ್ಟಿದ್ದ ಪಂತ್
ಮೊನ್ನೆ ಆಸಿಸ್ ವಿರುದ್ಧ ಪಂದ್ಯದಲ್ಲಿ ರಿಷಭ್ ಪಂತ್ ಫ್ಲಾಪ್ ಆಗಿದ್ರು. ನಂ.4ನಲ್ಲಿ ಕಣಕ್ಕಿಳಿದಿದ್ದ ರಿಷಭ್ ಪಂತ್ ಆಡಿದ ಎರಡು ಪಂದ್ಯಗಳಿಂದ ಕೇವಲ 4 ರನ್ ಗಳಿಸಿ ನಿರಾಸೆ ಮೂಡಿಸಿದ್ರು. ಇದೀಗ ಫ್ಲಾಪ್ ಪರ್ಫಾಮನ್ಸ್ ನ್ನ ಮರೆ ಮಾಚಲು ರಿಷಭ್ ಸಿಕ್ಕ ಅವಕಾಶಗಳನ್ನ ಚೆನ್ನಾಗಿ ಬಳಸಿಕೊಳ್ಳಬೇಕಿದೆ.
ಯಾವ ಸ್ಲಾಟ್ನಲ್ಲಿ ಕಣಕ್ಕಿಳಿಯುತ್ತಾರೆ ಡೆಲ್ಲಿ ಡ್ಯಾಶರ್ ?
ಇಂದು ಮೊಹಾಲಿಯಲ್ಲಿ ನಡೆಯಲಿರುವ ನಾಲ್ಕನೆ ಏಕದಿನ ಪಂದ್ಯದಲ್ಲಿ ರಿಷಬ್ ಯಾವ ಸ್ಲಾಟ್ನಲ್ಲಿ ಕಣಕ್ಕಿಳಿಯುತ್ತಾರಾ ಅನ್ನೋದೇ ಕೂತುಹಲದ ಸಂಗತಿಯಾಗಿದೆ. ರಿಷಭ್ ಅಂಬಾಟಿ ರಾಯ್ಡು ಬದಲು ನಂ.4ನಲ್ಲಿ ಕಣಕ್ಕಿಳಿಯುತ್ತಾರಾ ಅಥವಾ ಧೋನಿ ಆಡಿದ ಸ್ಲಾಟ್ನಲ್ಲಿ ಆಡ್ತಾರಾ ಅನ್ನೊದನ್ನ ಕದು ನೋಡಬೇಕಿದೆ.
ಒಟ್ನಲ್ಲಿ ಧೋನಿಯಿಂದಾಗಿ ರಿಷಭ್ ಪಂತ್ ಎರಡನೇ ಬಾರಿಗೆ ಅವಕಾಶ ಪಡೆಯುತ್ತಿದ್ದಾರೆ ಈ ಅವಕಾಶವನ್ನ ಪಡೆದು ರಿಷಭ್ ಅದ್ಹೇಗೆ ವಿಶ್ವಕಪ್ ಎಂಟ್ರಿ ಕೊಡ್ತಾರೆ ಅನ್ನೋದನ್ನ ಆಸಿಸ್ ವಿರುದ್ಧದ ಸರಣಿಯಲ್ಲಿ ಗೊತ್ತಾಗಲಿದೆ.