ಮಂಗಳೂರು: ಪಾಕಿಸ್ತಾನದಲ್ಲಿ ಬಂಧಿತರಾಗಿ, ಕೈದಿಗಳಾಗಿರುವ ಭಾರತೀಯರ ಬಿಡುಗಡೆಗೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ಪಾಕ್ ನಲ್ಲಿ ಬಂಧಿತರಾಗಿರುವ 74 ಮಂದಿಯ ಬಿಡುಗಡೆಗೆ ವಿವಿಧ ಹಂತಗಳಲ್ಲಿ ಪ್ರಯತ್ನ ನಡೆಯುತ್ತಿದೆ ರಾಜನಾಥ್ ತಿಳಿಸಿದ್ದಾರೆ. ಪುಲ್ವಾಮಾ ಘಟನೆ ಬಳಿಕ ಪಾಕಿಸ್ತಾನದ ಜತೆ ಕ್ರಿಕೆಟ್ ಸಂಬಂಧ ಕಡಿದು ಹಾಕಬೇಕು ಎಂಬ ಬೇಡಿಕೆ ಕುರಿತು ಯಾವುದೇ ನಿರ್ಧಾರ ಆಗಿಲ್ಲ ಎಂದು ಅವರು ಹೇಳಿದರು.
ಇದೇ ವೇಳೆ ನಾವು ರಾಷ್ಟ್ರ ಕಟ್ಟುವ ರಾಜಕಾರಣ ಮಾಡುತ್ತೇವೆ ಹೊರತು ಪಕ್ಷಕ್ಕಾಗಿ ಅಲ್ಲ ಎಂದರು. ಇನ್ನು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಸಚಿವ ರಾಜ್ ನಾಥ್ ಸಿಂಗ್ ತಿಳಿಸಿದ್ದಾರೆ.