ಹಾವೇರಿ : ದೇಶ ಭವಿಷ್ಯ ಈ ಚುನಾವಣೆಯಲ್ಲಿದೆ. ಈ ಕಾರಣದಿಂದ ಜನರು ಪ್ರಜ್ಞಾವಂತಿಕೆಯಿಂದ ಮತ ನೀಡಿ, ಜನನಾಯಕರನ್ನು ಆಯ್ಕೆ ಮಾಡಬೇಕು. ಜನರಿಗೆ ಬದುಕನ್ನು ಕಟ್ಟಿಕೊಟ್ಟ ಪಕ್ಷದ ಕಾಂಗ್ರೆಸ್ ಆಗಿದೆ. ಎಲ್ಲರನ್ನೂ ಒಂದೂಗೂಡಿಸಿ ನಡೆದುಕೊಂಡು ಹೋಗುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶ ಅಂಧಕಾರದಲ್ಲಿ ಇತ್ತು. ಇಂತಹ ದೇಶದಲ್ಲಿ ಅಭಿವೃದ್ಧಿ ಪರ್ವ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದಕ್ಕೆ ಜನರು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ನೀಡಬೇಕು. 60 ವರ್ಷಗಳ ಕಾಲದಲ್ಲಿ ಕೈಗಾರಿಕೆ, ಕೃಷಿ, ಬ್ಯಾಂಕಿಂಗ್ ಕ್ಷೇತ್ರದ ಕಾಂತ್ರಿ ಕಾಂಗ್ರೆಸ್ ಗೆ ಸಲ್ಲುತ್ತದೆ. ದೇಶದ ಏಕತೆ,ಸಮಗ್ರತೆ ದೃಷ್ಟಿಯಿಂದ ಕಾಂಗ್ರೆಸ್ ಗೆ ಮತನ ನೀಡಿ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.
ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ದೇಶದ ಇಂದು ಎಲ್ಲ ರಂಗದಲ್ಲಿ ಸಾಧನೆ ಮಾಡಿದೆ. ಇತ್ತೀಚೆಗೆ ಆಯ್ಕೆಯಾಗಿರುವ ಬಿಜೆಪಿ ಕಾಂಗ್ರೆಸ್ ಏನು ಮಾಡಿದೆ ಅನ್ನುತ್ತಿದ್ದಾರೆ. ಅವರು ಮೊದಲು ದೇಶ ಕಾಂಗ್ರೆಸ್ ಇತಿಹಾಸ ಓದಿಕೊಳ್ಳಲಿ. ಇಂದು ದೇಶ ಆರ್ಥಿಕ ಸಬಲಿಕರಣ ಹೊಂದಿರುವ ದೇಶವನ್ನು ಇಂದು ಅಧಿಕಾರ ನಡೆಸುತ್ತಿರುವ ಬಿಜೆಪಿ ಹಾಳು ಮಾಡುತ್ತಿದೆ ಎಂದರು.
ಮೋದಿ ಸುಳ್ಳು ಆಶ್ವಾಸನೆ ಮೂಲಕ ದೇಶದ ಜನರಿಗೆ ಮೋಸ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಅಧಿಕಾರ ಪೂರ್ಣಗೊಳ್ಳುವ ಸಮಯ ಬಂದರು ಒಂದು ಬೇಡಿಕೆ ಈಡೇರಿಸಿಲ್ಲ. ಆದರೆ, ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಎಲ್ಲಾ ಬೇಡಿಕೆಗಳನ್ನು ಈಡೇಸುವ ಮೂಲಕ ಜನಪರ ಪಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಅವರನ್ನು ಆತ್ಮಹತ್ಯೆಯ ಕೋಪಕ್ಕೆ ದುಡಿದೆ. ಆದರೆ ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಿ, ಅವರನ್ನು ಕಾಪಾಡಿದೆ.
ಇಂದು ಕೇಂದ್ರ ಸರಕಾರ ಸ್ವಾಯತ್ತ ಸಂಸ್ಥೆಗಳನ್ನು ದುಪರಯೋಗ ಮಾಡಿಕೊಳ್ಳುತ್ತಿದ್ದಾರೆ. ಧ್ವೇಶದ ರಾಜಕಾರಣ ಮಾಡುತ್ತಿದ್ದಾರೆ. ರಫೇಲ್ ಹಗರದ ಭಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಭಯೋತ್ಪಾದನೆ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರದಲ್ಲಿ ಕಾಂಗ್ರೆಸ್ ಆಯ್ಕೆ ಮಾಡೋಣ ಎಂದರು.