
ನವದೆಹಲಿ: ಪಿಎನ್ ಬಿ ಬ್ಯಾಂಕ್ ವಂಚನೆ ಪ್ರಕರಣದ ರೂವಾರಿ, ವಜ್ರದ ವ್ಯಾಪಾರಿ ಲಂಡನ್ನಲ್ಲಿ ಆಶ್ರಯ ಪಡೆದುಕೊಂಡಿದ್ದು, ಅಲ್ಲಿಯೂ ವಜ್ರದ ಉದ್ಯಮ ನಡೆಸುತ್ತಾ ಆರಾಮವಾಗಿ ಓಡಾಡಿಕೊಂಡಿದ್ದಾರೆ.
ಗುರುತು ಪತ್ತೆ ಹಚ್ಚಲಾಗದ ರೀತಿಯ ಪೋಷಾಕಿನೊಂದಿಗೆ ನೀರವ್ ಮೋದಿ ಲಂಡನ್ನ ಬೀದಿಗಳಲ್ಲಿ ಓಡಾಡುತ್ತಿರುವುದನ್ನು ಬ್ರಿಟಿಷ್ ಪತ್ರಿಕೆ ‘ದಿ ಟೆಲಿಗ್ರಾಫ್’ ವರದಿಗಾರ ಪತ್ತೆಹಚ್ಚಿದ್ದಾರೆ. ಕಂಡ ಕೂಡಲೇ ಮೋದಿಗೆ ಹಲವು ಪ್ರಶ್ನೆಗಳನ್ನು ವರದಿಗಾರ ಕೇಳಿದ್ದಾರಾದರೂ, ಯಾವ ಪ್ರತಿಕ್ರಿಯೆಯನ್ನೂ ನೀಡದೆ “ನೋ ಕಮೆಂಟ್ಸ್” ಎಂದು ಹೇಳಿ ಮೋದಿ ಹೊರಟು ಹೋಗಿದ್ದಾರೆ.
ಈ ಘಟನಾವಳಿಯ ವಿಡಿಯೋವನ್ನು ‘ದಿ ಟೆಲಿಗ್ರಾಫ್’ ಟ್ವಿಟರ್ನಲ್ಲಿ ಪ್ರಕಟಿಸಿದೆ. ಲಂಡನ್ನಲ್ಲಿ ಎಗ್ಗಿಲ್ಲದೇ ಜೀವನ ಸಾಗಿಸುತ್ತಿರುವ ನೀರವ್ ಮೋದಿ ಅವರು, ಲಂಡನ್ನ ವೆಸ್ಟ್ ಎಂಡ್ ಪ್ರದೇಶದಲ್ಲಿ ಮತ್ತೊಂದು ವಜ್ರದ ಉದ್ಯಮ ಆರಂಭಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ನೀರವ್ ಮೋದಿ ಅವರು ಭಾರತೀಯ ಬ್ಯಾಂಕ್ಗಳಿಗೆ ಸುಮಾರು 13,000 ಕೋಟಿ ರೂಪಾಯಿಗಳನ್ನು ವಂಚಿಸಿ ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದಾರೆ.
Nirav Modi Seen Walking On London Street