ಮೂರನೇ ಪಂದ್ಯದಲ್ಲಿ ಮುಗ್ಗರಿಸಿ ಬಿದ್ದ ಟೀಂ ಇಂಡಿಯಾ

ರಾಂಚಿ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅಸ್ಟ್ರೇಲಿಯಾ 32 ರನ್‍ಗಳ ಅಂತರದಿಂದ ಸೋಲು ಕಂಡಿದೆ. ಇದರೊಂದಿಗೆ ತವರಿನಲ್ಲಿ ಕೊನೆಯ ಏಕದಿನ ಪಂದ್ಯ ಆಡಿದ ಧೋನಿಗೆ ಸೋಲಿನ ಉಡುಗೊರೆ ಕೊಡಲಾಯಿತು.

314 ರನ್‍ಗಳ ಬೃಹತ್ ಮೊತ್ತವನ್ನ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ ಬಾರಿಸಿ ಗೆಲುವಿನ ಭರವಸೆ ಮೂಡಿಸಿದ್ರು. ಆದರೆ 123 ರನ್‍ಗಲಿಸಿದ್ದಾಗ ವಿರಾಟ್ ಕೊಹ್ಲಿ ಜಾಂಪಾಗೆ ಬಲಿಯಾದ್ರು. ಇದರೊಂದಿಗೆ ತಂಡದ ಸೋಲು ಖಚಿತವಾಯಿತು. ಏಳನೇ ವಿಕೆಟ್‍ಗೆ ಜೊತೆಗೂಡಿದ ಆಲ್‍ರೌಂಡರ್‍ಗಳಾದ ರವೀಂದ್ರ ಜಡೇಜಾ ಮತ್ತು ವಿಜಯ್ ಶಂಕರ್ ಭರವಸೆ ಮೂಡಿಸಿದ್ರು. ಆದರೆ ಇಬ್ಬರು ಯಡವಟ್ಟು ಮಾಡಿಕೊಂಡು ಪೆವಿಲಿಯನ್ ಸೇರಿದ್ರು. ಕೊನೆಯಲ್ಲಿ ಟೀಂ ಇಂಡಿಯಾ 48.2 ಓವರ್‍ನಲ್ಲಿ 281 ರನ್‍ಗಲಿಗೆ ಆಲೌಟ್ ಆಯಿತು.

ಆಸಿಸ್ ಪರ ಪ್ಯಾಟ್ ಕಮಿನ್ಸ್, ಆಡಾಮ್ ಜಾಂಪಾ ಮತ್ತು ರಿಚಡ್ರ್ಸ್‍ನ್ ತಲಾ ಮೂರು ವಿಕೆಟ್ ಪಡೆದ್ರು.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಆರಂಭಿಕ ಬ್ಯಾಟ್ಸ್‍ಮನ್ ಉಸ್ಮಾನ್ ಖ್ವಾಜಾ (104), ಗ್ಲೇನ್ ಮ್ಯಾಕ್ಸ್ ವೆಲ್ 47 ರನ್ ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ನಿಗದಿತ ಓವರ್‍ನಲ್ಲಿ 5 ವಿಕೆಟ್ ನಷ್ಟಕ್ಕೆ 313 ರನ್‍ಗಳಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ