ಬೀಜಿಂಗ್: ಪಾಕಿಸ್ತಾನ ಚೀನಾದ ಮಿತ್ರರಾಷ್ತ್ರವಾಗಿ ಮುಂದುವರೆಯುತ್ತದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಶಮನ ಮಾಡುವುದಕ್ಕೂ ಚೀನಾ ಮಧ್ಯಸ್ಥಿಕೆ ವಹಿಸಿತ್ತು ಎಂದು ಹೇಳುವ ಮೂಲಕ ವಾಂಗ್ ಅವರು ಅಚ್ಚರಿಯನ್ನೂ ಮೂಡಿಸಿದರು. ಈ ವಿವಾದದಲ್ಲಿ ಯಾವುದೇ ಅನ್ಯ ರಾಷ್ಟ್ರಗಳ ಮಧ್ಯಪ್ರವೇಶವನ್ನು ಭಾರತವು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದು, ಪಾಕಿಸ್ತಾನವು ತೃತೀಯ ರಾಷ್ಟ್ರವೊಂದರ ಮಧ್ಯಸ್ಥಿಕೆಗೆ ಉತ್ಸಾಹ ತೋರಿಸುತ್ತಲೇ ಇತ್ತು ಎಂದು ಹೆಳಿದ್ದಾರೆ.
ವಿವಾದವನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸದಂತೆ ಹಾಗೂ ಸಮಸ್ಯೆಯನ್ನು ಮಾತುಕತೆಯ ಮೂಲಕ ವಿವಾದ ಪರಿಹರಿಸಿಕೊಳ್ಳುವಂತೆ ಚೀನಾವು ಉಭಯ ದೇಶಗಳಿಗೆ ಹಿಂದಿನಿಂದಲೂ ಸಲಹೆ ನೀಡುತ್ತಲೇ ಇತ್ತು ಎಂದು ಚೀನಾ ಸಚಿವರು ಹೇಳಿದ್ದಾರೆ.
ಇದೇ ವೇಳೆ, ದೇಶದ ಸಾರ್ವಭೌಮತೆ ಮತ್ತು ಏಕತೆಯನ್ನು ಸಂಪೂರ್ಣವಾಗಿ ಗೌರವಿಸಬೇಕಾಗುತ್ತದೆ. ಚೀನಾ ತನ್ನ ಮಧ್ಯಸ್ಥಿಕೆ ಸಂದರ್ಭ ಈ ತತ್ವಗಳನ್ನು ಅನುಸರಿಸಿತ್ತು ಮತ್ತು ಉದ್ವಿಗ್ನತೆ ಶಮನ ಮಾಡುವಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸಿತ್ತುಎಂದು ವಾಂಗ್ ಹೇಳಿದ್ದಾರೆ.
Chinese FM talks friendship but favours Pakistan