ರಾಂಚಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯವು ಅತಿ ಹೆಚ್ಚಿನ ಮಹತ್ವವನ್ನು ಗಿಟ್ಟಿಸಿಕೊಂಡಿದೆ. ಯಾಕೆಂದರೆ ಭಾರತೀಯ ಸೇನೆಗೆ ಗೌರವಾರ್ಥ ಟೀಮ್ ಇಂಡಿಯಾ ಆಟಗಾರರು ವಿಶೇಷವಾಗಿ ಸಿದ್ಧಪಡಿಸಿದ ಆರ್ಮಿ ಕ್ಯಾಪ್‌ನೊಂದಿಗೆ ಕಣಕ್ಕಿಳಿದಿದೆ.
ಬಳಿಕ ಟಾಸ್ ವೇಳೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಭಾರತೀಯ ಸೇನೆಯ ಗೌರವಾರ್ಥ ನಾವು ಈ ವಿಶೇಷ ಆರ್ಮಿ ಕ್ಯಾಪ್ ಧರಿಸುತ್ತಿದ್ದೇವೆ.
ನಾವೆಲ್ಲರೂ ಪಂದ್ಯ ಶುಲ್ಕವನ್ನು ಪುಲ್ವಾಮಾದಲ್ಲಿ ಹುತಾತ್ಮರಾದ ಧೀರ ಯೋಧರ ಕುಟುಂಬಗಳ ಪೋಷಣೆಗಾಗಿ ಸಮರ್ಪಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಹುತಾತ್ಮ ಯೋಧರ ಕುಟುಂಬಕ್ಕೆ ತಮ್ಮಿಂದಾಗುವಷ್ಟು ಧನ ಸಹಾಯ ಮಾಡುವಂತೆ ವಿನಂತಿ ಮಾಡಲು ಬಯಸುತ್ತೇವೆ. ನಮ್ಮ ಪಾಲಿಗಿದು ಅತಿ ವಿಶೇಷ ಪಂದ್ಯ ಎಂದರು.
ಪಂದ್ಯದ ವೀಕ್ಷಕ ವಿವರಣೆಕಾರರಿಗೂ ಸೇನಾ ಕ್ಯಾಪ್ ನೀಡಲಾಗಿದೆ.ಪಂದ್ಯ ನಡೆಯುತಿದ್ದ ವೇಳೆ ಕಾಮೆಂಟೇಟರ್ಸ್ ಇರುವಲ್ಲಿಗೇ ತೆರಳಿದ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಎಲ್ಲ ವೀಕ್ಷಕ ವಿವರಣೆಗಾರರಿಗೂ ಸೇನಾ ಕ್ಯಾಪ್ಗಳನ್ನ ನೀಡಿದ್ರು.