ಮೈಸೂರು,ಮಾ.9- ಮೊಬೈಲ್ ಟವರ್ಗಳಲ್ಲಿ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಜಿಪಿಎಸ್ ನೆರವಿನಿಂದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಸೈಯದ್ ಜಾಫರ್, ಸೈಯದ್ ಅಬು, ಖಾಜಾ ನವಾಬ್ ಬಂಧಿತ ಆರೋಪಿಗಳು.
ಆರೋಪಿಗಳು ಮೊಬೈಲ್ ಟವರ್ಗಳಿಗೆ ಅವಳವಡಿಸಿದ್ದ ಬ್ಯಾಟರಿಯನ್ನು ಕಳವು ಮಾಡಿ ಪರಾರಿಯಾಗುತ್ತಿದ್ದರು. ಈ ಬಗ್ಗೆ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಇವರನನ್ನು ಹಿಡಿಯಲು ಪೊಲೀಸರಿಗೆ ತಲೆ ನೋವಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸ್ಇಲಾಖೆ ಹಾಗೂ ಇಂಡಸ್ ಸೆಕ್ಯೂರಿಟಿ ಸಿಸ್ಟಮ್ನ ಸಿಬ್ಬಂದಿಗಳು ಬ್ಯಾಟರಿಗಳಿಗೆ ಜಿಪಿಎಸ್ ಚಿಪ್ಪನ್ನು ಅಳವಡಿಸಿದರು. ಇದರ ಅರಿವಿಲ್ಲದ ಕಳ್ಳರು. ಚಿಲ್ಕುಂದ ಸೇರಿದಂತೆ ಇನ್ನು ಕೆಲವು ಕಡೆ ಟವರ್ನಲ್ಲಿ ಬ್ಯಾಟರಿಯನ್ನು ಕಳವು ಮಾಡಿ ಲಾರಿಯಲ್ಲಿ ತುಂಬಿಕೊಂಡು ಬೆಂಗಳೂರಿಗೆ ಸಾಗಿಸುತ್ತಿದ್ದರು.
ಈ ವೇಳೆ ಜಿಪಿಎಸ್ನ ಸಹಾಯದಿಂದ ಮೈಸೂರಿನ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸಿಯಾಗಿದ್ದಾರೆ.
ಬಂಧಿತರಿಂದ 13ಲಕ್ಷ ರೂ ಮೌಲ್ಯದ 111ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.