ಬೆಂಗಳೂರು, ಮಾ.8- ರೌಡಿ ಲಕ್ಷ್ಮಣನನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಗ್ಗೆ ಉತ್ತರ ವಿಭಾಗದ ಪೊಲೀಸರಿಗೆ ಸುಳಿವು ಲಭಿಸಿದೆ.
ಹೆಣ್ಣಿನ ವಿಚಾರದಲ್ಲಿ ಈತನ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದು, ಆ ನಿಟ್ಟಿನಲ್ಲಿ ತೀವ್ರ ತನಿಖೆ ಕೈಗೊಂಡಿದ್ದಾರೆ.
ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿರುವ ನಾಲ್ಕು ವಿಶೇಷ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದು, ಎರಡು ತಂಡಗಳು ಹೊರ ರಾಜ್ಯಗಳಿಗೆ ಹೋಗಿವೆ.
ಉಳಿದ ಎರಡು ತಂಡಗಳಲ್ಲಿ ಒಂದು ತಂಡ ಬೆಂಗಳೂರಿನಲ್ಲಿ, ಇನ್ನೊಂದು ತಂಡ ನೆರೆಯ ಜಿಲ್ಲೆಗಳಲ್ಲಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿವೆ.
ಇನ್ನೆರಡು, ಮೂರು ದಿನಗಳಲ್ಲಿ ಪರಾರಿಯಾಗಿರುವ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜ್ಞಾನಭಾರತಿ, ಕಾಮಾಕ್ಷಿಪಾಳ್ಯ ಠಾಣೆಗಳ ರೌಡಿಶೀಟರ್ ಆಗಿದ್ದ ಲಕ್ಷ್ಮಣ್ ವಿರುದ್ಧ ಹಲವು ಪ್ರಕರಣಗಳಿದ್ದು, ಹದಿನೈದು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದನು.