ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಕಾಶಿ: ವಿಶ್ವ ವಿಖ್ಯಾತ ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ ಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಕಾಶಿ ವಿಶ್ವನಾಥನ ದರ್ಶನ ಪಡೆದ ಪ್ರಧಾನಿ ಮೋದಿ, ವಿಶೇಷ ಪೂಜೆ ಸಲ್ಲಿಸಿದರು.

ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್‌ಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಮೋದಿ, ಕಾಶಿ ವಿಶ್ವನಾಥ ಧಾಮದ ಕಡೆ ಸಾಗುವ ಮಾರ್ಗವನ್ನು ಮತ್ತಷ್ಟು ಅಗಲಗೊಳಿಸುವ ಹಾಗೂ ಸುಂದರಗೊಳಿಸುವ ಯೋಜನೆ ಇದಾಗಿದೆ ಎಂದರು.

ಸಕ್ರಿಯ ರಾಜಕೀಯಕ್ಕೆ ಬರುವ ಮೊದಲೇ ಕಾಶಿಗೆ ನಾನು ಆಗಾಗ್ಗೆ ಬರುತ್ತಿದ್ದೆ. ಮಂದಿರ ಸಮುಚ್ಚಯಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಆಗಲೇ ಯೋಚಿಸುತ್ತಿದ್ದೆ. ಭೋಲೇನಾಥದ ಆಶೀರ್ವಾದದಿಂದ ಈಗ ಅಂತಹ ಅವಕಾಶ ಒದಗಿ ಬಂದಿದೆ ಎಂದು ಹೇಳಿದರು.

PM Modi Lays Foundation Stone Of Kashi Vishwanath Temple Corridor

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ