ರಾಜಸ್ಥಾನದ ಬಿಕಾನೇರ್‌ನಲ್ಲಿ ಮಿಗ್-21 ವಿಮಾನ ಪತನ

ಬಿಕಾನೇರ್‌: ರಾಜಸ್ಥಾನದ ಬಿಕಾನೇರ್‌ನಲ್ಲಿ ಭಾರತೀಯ ವಾಯುಪಡೆಯ ಮಿಗ್-21 ವಿಮಾನವೊಂದು ಪತನಗೊಂಡಿದೆ. ಪೈಲಟ್‌ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಬಿಕಾನೇರ್‌ನ ವಾಯುನೆಲೆಯಿಂದ ದೈನಂದಿನ ಗಸ್ತು ಹಾರಾಟದಲ್ಲಿ ತೊಡಗಿದ್ದಾಗ ವಿಮಾನ ಪತನಗೊಂಡಿದೆ. ಯಾವುದೇ ಅಪಾಯವಿಲ್ಲದೆ ಪೈಲಟ್ ಸುರಕ್ಷಿತವಾಗಿ ಹೊರ ಜಿಗಿದು ಪಾರಾಗಿದ್ದಾರೆ.

ಅಪಘಾತದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಬಿಕಾನೇರ್‌ನಿಂದ 12 ಕಿ.ಮೀ ದೂರದ ಶೋಭಾಸರ್‌ ಕೀ ದಾನಿ ಎಂಬಲ್ಲಿ ವಿಮಾನ ಪತನಗೊಂಡಿದೆ ಎಂದು ಬಿಕಾನೇರ್‌ ಎಸ್‌ಪಿ ಪ್ರದೀಪ್ ಮೋಹನ್ ಶರ್ಮಾ ತಿಳಿಸಿದ್ದಾರೆ.

ಹಕ್ಕಿ ಡಿಕ್ಕಿ ಹೊಡೆದಿರುವುದೇ ಅಪಘಾತಕ್ಕೆ ಕಾರಣವೆಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

IAF’s MiG-21 crashes in Rajasthan’s Bikaner

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ