ಇಂಡೋ – ಆಸಿಸ್ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಗೆಲುವಿನ ನಾಗಲೋಟದಲ್ಲಿ ತೇಲಾಡುತ್ತಿರುವ ಟೀಂ ಇಂಡಿಯಾ ಇಂದು ನಡೆಯುವ ಹೈವೋಲ್ಟೇಜ್ ಕದನದಲ್ಲಿ ಆಸ್ಟ್ರೇಲಿಯಾ ತಂಡವನ್ನ ಎದುರಿಸಲಿದೆ. ಹಾಗಾದ್ರೆ ಇಂದು ನಡೆಯುವ ಇಂಡೋ – ಆಸಿಸ್ ಹೈವೋಲ್ಟೇಜ್ ಕದನ ಕಂಪ್ಲೀಟ್ ಡಿಟೇಲ್ಸ್ ನ್ನ ನೋಡೋಣ ಬನ್ನಿ.
ರಾಂಚಿ ಅಂಗಳದಲ್ಲಿ ಕೊಹ್ಲಿ ಪಡೆಗೆ ಮತ್ತೊಂದು ಕಠಿಣ ಸವಾಲು
ಸತತ ಎರಡು ಪಂದ್ಯಗಳನ್ನ ಗೆದ್ದು ಬೀಗಿರುವ ಕೊಹ್ಲಿ ಪಡೆ ಇಂದು ರಾಂಚಿ ಅಂಗಳದಲ್ಲಿ ಆ್ಯರಾನ್ ಫಿಂಚ್ ಪಡೆಯನ್ನ ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಸುಲಭವಾಗಿ ಗೆದ್ದಿದ್ದ ಕೊಹ್ಲಿ ಪಡೆ ಎರಡನೇ ಪಂದ್ಯದಲ್ಲಿ ತಿಣುಕಾಡಿ ಗೆದ್ದಿತ್ತು. ಹೀಗಾಗಿ ಸ್ಪಿನ್ನರ್ಗಳಿಗೆ ನೆರವಾಗುವ ಪಿಚ್ನಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ. ಇದಕ್ಕಾಗಿ ಭಾರೀ ಪ್ಲಾನ್ಗಳೊಂದಿಗೆ ಕಣಕ್ಕಿಳಿಯಬೇಕಿದೆ.
ಸರಣಿ ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ಪ್ಲಾನ್
ಸತತ ಎರಡು ಪಂದ್ಯಗಳನ್ನ ಗೆದ್ದು ಹ್ಯಾಟ್ರಿಕ್ ಗೆಲುವಿನ ಹೊಸ್ತಿಲಲ್ಲಿರುವ ಟೀಂ ಇಂಡಿಯಾ ಇಂದಿನ ಪಂದ್ಯವನ್ನ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ಪ್ಲಾನ್ ಮಾಡಿದೆ. ತಂತ್ರಕ್ಕೆ ಪ್ರತಿ ತಂತ್ರ ರೂಪಿಸಿ ಫಿಂಚ್ ಪಡೆಯನ್ನ ಪಂಕ್ಚರ್ ಮಾಡಲು ಟೀಂ ಇಂಡಿಯಾ ಸಜ್ಜಾಗಿದೆ. ಈ ಅಂಗಳದಲ್ಲಿ ಕೇವಲ ಮೂರು ಏಕದಿನ ಪಂದ್ಯಗಳನ್ನ ಮಾತ್ರ ಆಡಿದ್ದು ಈ ಅಂಗಳದಲ್ಲಿ ಬ್ಲೂ ಬಾಯ್ಸ್ ಗೆಲುವಿನ ಬಾವುಟ ಹಾರಿಸಬೇಕಿದೆ. ಇದಕ್ಕಾಗಿ ಕೊಹ್ಲಿ ಬಾಯ್ಸ್ ನೆಟ್ಸ್ನಲ್ಲಿ ಬೆವರಿಳಿಸುತ್ತಿದ್ದಾರೆ.
ಧವನ್ ಬದಲು ಕನ್ನಡಿಗ ರಾಹುಲ್ಗೆ ಚಾನ್ಸ್
ಆಡಿದ ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿರುವ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಇಂದು ನಡೆಯುವ ಪಂದ್ಯದಲ್ಲಿ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯೋದು ಅನುಮಾನದಿಂದ ಕೂಡಿದೆ. ಆಡಿದ ಎರಡು ಪಂದ್ಯಗಳಿಂದ ಧವನ್ ಬಾರಿಸಿದ್ದು ಕೇವಲ 21 ರನ್ ಆಗಿದೆ. ಇತ್ತಚೆಗೆ ನಡೆದ ಟಿ20 ಸರಣಿಯಲ್ಲಿ ಸಾಲಿಡ್ ಬ್ಯಾಟಿಂಗ್ ಮಾಡಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಧವನ್ ಬದಲು ಆಡುವ ಸಾಧ್ಯತೆ ಇದೆ.
ತವರಿನಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿದ್ದಾರೆ ಮಾಹಿ
ನಿವೃತ್ತಿಯ ಅಂಚಿನಲ್ಲಿರುವ ಧೋನಿ ವಿಶ್ವಕಪ್ಗೂ ಮುನ್ನ ತವರಿನಲ್ಲಿ ಇಂದು ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡುತ್ತಿದ್ದಾರೆ. ರಾಂಚಿಯಲ್ಲಿ ಟೀಂ ಇಂಡಿಯಾ ಆಡಿದ್ದು ಕಮ್ಮಿ ಇಂದು ತಮ್ಮ ತವರು ಅಂಗಳದಲ್ಲಿ ಧೋನಿ ಕೊನೆಯ ಏಕದಿನ ಪಂದ್ಯ ಆಡುತ್ತಿದ್ದಾರೆ. ಧೋನಿಗೆ ತಂಡದ ಆಟಗಾರು ಗೆಲುವಿನ ಉಡುಗೊರೆ ನೀಡಲು ಕಾತರದಿಂದ ಕಾದಿದ್ದಾರೆ.
ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ ಸ್ವಿಂಗ್ ಕಿಂಗ್ ಭುವಿ
ಇಂದು ಆಸಿಸ್ ವಿರುದ್ಧದ ಪಂದ್ಯದಲ್ಲಿ ತಂಡದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಕಮ್ಬ್ಯಾಕ್ ಮಾಡುವ ಸಾಧ್ಯತೆ ಇದೆ. ಕೆಲವು ತಿಂಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಹೇಳಿಕೊಳ್ಳುವಂತ ಪರ್ಫಾಮನ್ಸ್ ಕೊಟ್ಟಿರಲಿಲ್ಲ. ವಿಶ್ರಾಂತಿಗೆ ಮರಳಿದ್ದ ಭುವಿ ವಿಶ್ವಕಪ್ಗೂ ಮುನ್ನ ಇಂದಿನ ಪಂದ್ಯದಲ್ಲಿ ಪರೀಕ್ಷೆಗೆ ಒಳಪಡಲಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವೇಗಿಗಳಾದ ಮೊಹ್ಮದ್ ಶಮಿ ಅಥವಾ ಯಾರ್ಕರ್ ಕಿಂಗ್ ಭುವನೇಶ್ವರ್ ಕುಮಾರ್ ಗೆ ರೆಸ್ಟ್ ನೀಡುವ ಸಾಧ್ಯತೆ ಇದೆ.
ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಕಾಂಗರೂಸ್
ಟಿ20 ಯಲ್ಲಿ ಅಬ್ಬರಿಸಿ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಬರೀ ಸೋಲುಗಳನ್ನ ಕಂಡು ಸರಣಿ ಕೈಚೆಲ್ಲಿಕೊಳ್ಳುವ ಭೀತಿಯಲ್ಲಿರುವ ಆಸಿಸ್ ಇಂದಿನ ಪಂದ್ಯವನ್ನ ಹೇಗಾದ್ರು ಮಾಡಿ ಗೆದ್ದು ಸರಣಿಯನ್ನ ಜೀವಂತವಾಗಿರಿಸಿಕೊಳ್ಳಬೇಕಿದೆ. ತಂಡದ ಬೌಲರ್ಸ್ಗಳು ಹೇಳಿಕೊಳ್ಳುವಂತಹ ಪರ್ಫಾಮನ್ಸ್ ಕೊಡುತ್ತಿಲ್ಲ ಹೀಗಾಗಿ ತಂಡದ ಬ್ಯಾಟ್ಸ್ಮನ್ಗಳು ಪಂದ್ಯವನ್ನ ಗೆಲ್ಲಿಸಿಕೊಡಬೇಕಾದ ಅನಿವಾರ್ಯತೆಯನ್ನ ಎದುರಿಸಬೇಕಾಗಿದೆ. ವೇಗಿ ಪ್ಯಾಟ್ ಕಮಿನ್ಸ್ ಮತ್ತು ಸ್ಪಿನ್ನರ್ ಆ್ಯಡಾಮ್ ಜಾಂಪಾ ವಿಕೆಟ್ಗಳ ಗೊಂಚಲು ಪಡೆದ್ರು ಕೊಹ್ಲಿ ಪಡೆಯನ್ನ ಕಟ್ಟಿಹಾಕಲಾಗುತ್ತಿಲ್ಲ. ಇನ್ನು ತಂಡದ ಆಲ್ರೌಂಡರ್ಗಳು ಅರ್ಧ ಶತಕ ಬಾರಿಸಿದ್ರು ತಂಡಕ್ಕೆ ಗೆಲುವು ತಂದುಕೊಡಲು ಆಗದೇ ಪರದಾಡುತ್ತದಿ್ದಾರೆ.
ಒಟ್ಟಾರೆ ರಾಂಚಿಯಲ್ಲಿ ನಡೆಯಲಿರುವ ಪಂದ್ಯ ಹೈವೋಲ್ಟೇಜ್ನಿಂದ ಕೂಡಿದ್ದು ಯಾರಿಗೆ ವಿಜಯ ಮಾಲೆ ಅನ್ನೋದನ್ನ ಕಾದು ನೋಡಬೇಕಿದೆ.