ಧೋನಿಗೆ ಗೆಲುವಿನ ಉಡುಗೊರೆ ಕೊಡುತ್ತಾ ಬ್ಲೂ ಬಾಯ್ಸ್

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್. ಇಂದು ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಇಂದು ಆಸಿಸ್ ವಿರುದ್ಧ ರಾಂಚಿಯಲ್ಲಿ ಧೋನಿ ಆಡುತ್ತಿದ್ದಾರೆ. ಈ ಕಾರಣಕ್ಕಾಗಿ ಇಂದು ನಡೆಯುವ ಇಂಡೋ- ಆಸಿಸ್ ಕದನ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

37 ವರ್ಷದ ಮಿಸ್ಟರ್ ಕೂಲ್ ಧೋನಿ ಭಾರತ ಕ್ರಿಕೆಟ್ಗೆ ಕೊಟ್ಟ ಕೊಡುಗೆ ಅಪಾರ . ಟೀಂ ಇಂಡಿಯಾ ನಾಯಕತ್ವಕ್ಕೆ ಹೊಸ ಚರಿಷ್ಮಾ ಬರೆದ ಮಾಹಿ ಮೂರು ಐಸಿಸಿ ಟ್ರೋಫಿಗಳನ್ನ ತಂದುಕೊಟ್ಟು ಭಾರತ ಕ್ರಿಕೆಟ್ನ ಹಿರಿಮೆಯನ್ನ ಇನ್ನಷ್ಟು ಹೆಚ್ಚಿಸಿದ್ದಾರೆ. ಧೊನಿ ಸಾಲಿಡ್ ಬ್ಯಾಟಿಂಗ್, ವಿಶಿಷ್ಟ ಶೈಲಿಯ ವಿಕೆಟ್ ಕೀಪಿಂಗ್ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಧೋನಿ ಇಂದಿನ ಎಲ್ಲ ಯುವ ಕ್ರಿಕೆಟಿಗರಿಗೆ ರೋಲ್ ಮಾಡಲ್ ಅಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಮಾಹಿ ಇನ್ನು ಕೆಲವೇ ತಿಂಗಳಿನಲ್ಲಿ ಕೊನೆಯ ವಿಶ್ವಕಪ್ ಆಡುತ್ತಿದ್ದಾರೆ.

ತವರಿನಲ್ಲಿ ಕೊನೆಯ ಏಕದಿನ ಪಂದ್ಯ ಆಡುತ್ತಿದ್ದಾರೆ ರಾಂಚಿ ಱಂಬೊ
ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಧೋನಿ ಇಂದು ತಮ್ಮ ತವರು ರಾಂಚಿಯಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಇಂದಿನ ಪಂದ್ಯ ಸಾಕಷ್ಟು ಹೈವೋಲ್ಟೇಜ್ನಿಂದ ಕೂಡಿದೆ. ರಾಂಚಿ ಅಂಗಳ ಮಾಹಿಗೆ ನೆಚ್ಚಿನ ಅಂಗಳ ಆಗಿರೋದ್ರಿಂದ ಇಂದಿನ ಪಂದ್ಯದಲ್ಲಿ ಧೋನಿ ಸಿಡಲಬ್ಬರದ ಬ್ಯಾಟಿಂಗ್ ಮಾಡ್ತಾರೆ ಅನ್ನೋ ನಿರೀಕ್ಷೆಗಳಿವೆ. ಧೋನಿ ತವರಿನಲ್ಲಿ ಅಬ್ಬರಿಸೋದನ್ನ ಕಾಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

ಗೆಲುವಿನ ಉಡುಗೊರೆ ಕೊಡೋಕೆ ಟೀಂ ಇಂಡಿಯಾ ರೆಡಿ
ತವರಿನಲ್ಲಿ ಕೊನೆಯ ಪಂದ್ಯ ಆಡುತ್ತಿರುವ ಚಾಂಪಿಯನ್ ಪ್ಲೇಯರ್ ಧೋನಿಗೆ ಆಸಿಸ್ ವಿರುದ್ಧ ಗೆದ್ದು ಗೆಲುವಿನ ಉಡುಗೊರೆ ಕೊಡಲು ರೆಡಿಯಾಗಿದೆ. ತಂಡದ ಆಟಗಾರರಿಗೆ ಸ್ಪೂರ್ತಿಯ ಚಿಲುಮೆಯಾಗಿರುವ ಧೋನಿಗೆ ಗೆಲುವಿನ ಉಡುಗೊರೆ ಕೊಟ್ಟು ಪಂದ್ಯವನ್ನ ಸ್ಮರಣಿವಾಗಿರಿಸಲು ಹೋರಾಟ ಮಾಡಲಿದೆ. ಕಷ್ಟದ ಸಂದರ್ಭದಲ್ಲಿ ತಂಡವನ್ನ ಅದೆಷ್ಟೋ ಬಾರಿ ಕಾಪಾಡಿರುವ ಧೋನಿಗೆ ಇಂದಿನ ಪಂದ್ಯವನ್ನ ಗೆದ್ದು ಕೊಡುವುದೇ ನಿಜವಾದ ಉಡುಗೊರೆಯಾಗಿದೆ.
ಈ ಬಗ್ಗೆ ಸ್ವತಃ ತಂಡದ ಓಪನರ್ ಕನ್ನಡಿಗ ಕೆ.ಎಲ್. ರಾಹುಲ್ ಮಾತನಾಡಿದ್ದಾರೆ…

ತವರಿನಲ್ಲಿ ಧೋನಿಯನ್ನ ಕಣ್ತುಂಬಿಕೊಂಡ ಅಭಿಮಾನಿಗಳು
ತವರಿನಲ್ಲಿ ಕೊನೆಯ ಏಕದಿನ ಪಂದ್ಯ ಆಡುತ್ತಿರುವ ಧೊನಿಯನ್ನ ತವರಿನ ಅಭಿಮಾನಿಗಳು ಮೊನ್ನೆ ಬರ್ಝರಿ ಸ್ವಾಗತ ಕೊಟ್ಟಿದ್ದರು. ಇದೀಗ ನಿನ್ನೆ ರಾಂಚಿ ಮೈದಾನದಲ್ಲಿ ಪ್ರಾಕ್ಟೀಸ್ ಮಾಡಲು ಬಂದ ಧೊನಿಯನ್ನ ಕಣ್ತುಂಬಿಕೊಂಡಿದ್ದಾರೆ. ಮಾಹಿ ಜೊತೆ ಸೆಲ್ಫಿ ಮತ್ತು ಆಟೋಗ್ರಾಫ್ ಪಡೆದು ಸಂತಸಪಟ್ಟಿದ್ದಾರೆ.

ಪ್ರಾಕ್ಟೀಸ್ ವೇಳೆ ಸಿಕ್ಸರ್ ಬಾರಿಸಿ ಅಬ್ಬರಿಸಿದ ಧೋನಿ
ಆಸಿಸ್ ಕದನಕ್ಕೂ ಮುನ್ನ ಧೋನಿ ನಿನ್ನೆ ಭರ್ಜರಿಯಾಗಿ ಪ್ರಾಕ್ಟೀಸ್ ಮಾಡಿದ್ದಾರೆ. ಸಿಕ್ಸರ್ ಚಾಲೆಂಜ್ನಲ್ಲಿ ಭಾಗವಹಸಿ ಬರೋಬ್ಬರಿ ಮೂರು ಸಿಕ್ಸರ್ಗಳನ್ನ ಬಾರಿಸಿ ಆಸಿಸ್ಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಒಟ್ನಲ್ಲಿ ಕೊನೆಯ ಪಂದ್ಯವನ್ನಾಡುತ್ತಿರುವ ಧೋನಿ ತವರಿನಲ್ಲಿ ಗೆದ್ದು ಗೆಲುವಿನ ಉಡುಗೊರೆ ಕೊಡಲಿ ಅನ್ನೋದೇ ಅಭಿಮಾನಿಗಳ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ