ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅರೆ ಇದೇನಪ್ಪ ಮಾಹಿ ಯಾವುದಾದ್ರು ದಾಖಲೆ ಬರೀತ್ತಾರಾ ಅಂತ ಅಂದುಕೊಳ್ಳಬೇಡಿ ? ಆಸಿಸ್ ವಿರುದ್ಧ ಧೋನಿ ಮೂರನೇ ಪಂದ್ಯದಲ್ಲಿ ಆಡೋದಕ್ಕೆ ಒಂದು ಕಾರಣವಿದೆ.
ಮೊನ್ನೆಯಷ್ಟೆ ಹೈದ್ರಾಬಾದ್ ಅಂಗಳದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಧೋನಿ ಏಕದಿನ ಫಾರ್ಮೆಟ್ನಲ್ಲಿ 13 ಸಾವಿರ ರನ್ ಪೂರೈಸಿ ಎಲೈಟ್ ಕ್ಲಬ್ ಸೇರಿದ್ರು. ಈ ಸಾಧನೆ ಮಾಡಿದ ತಂಡದ ನಾಲ್ಕನೆ ಬ್ಯಾಟ್ಸ್ಮನ್ ಎಂಭ ಗೌರವಕ್ಕೆ ಪಾತ್ರರಾಗಿದ್ರು. ಸಂಕಷ್ಟದಲ್ಲಿದ್ದಾಗ ಕೇದಾರ್ ಜಾಧವ್ ಜೊತೆ 141 ರನ್ಗಳ ಜೊತೆಯಾಟ ಆಡಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಇಷ್ಟೆ ಅಲ್ಲ 37 ವರ್ಷದ ಱಂಚಿ ಱಂಬೊ ಏಕದಿನ ಫಾರ್ಮೆಟ್ನಲ್ಲಿ 216ನೇ ಸಿಕ್ಸರ್ ಬಾರಿಸಿ ತಂಡದ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ಗೌರವಕ್ಕೂ ಪಾತ್ರರಾಗಿ ಹೊಸ ಮೈಲುಗಲ್ಲು ಮುಟ್ಟಿದ್ರು.
ತವರಿನಲ್ಲಿ ಕಾಂಗರೂಗಳನ್ನ ಎದುರಿಸುತ್ತಿದ್ದಾರೆ ಮಾಹಿ
ಚಾಂಪಿಯನ್ ಪ್ಲೇಯರ್ ಧೋನಿ ಇದೀಗ ಆಸಿಸ್ ವಿರುದ್ಧ ಮೂರನೇ ಏಕದಿನ ಪಂದ್ಯವನ್ನ ತಮ್ಮ ತವರು ಅಂಗಳ ರಾಂಚಿಯಲ್ಲಿ ಆಡುತ್ತಿದ್ದಾರೆ. ಇದೊಂದು ಕಾರಣಕ್ಕೆ ಧೋನಿ ಭಾರೀ ಸುದ್ದಿಯಲ್ಲಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಯಾವ ರೀತಿ ಆಡುತ್ತಾರೆ ಅನ್ನೋದನ್ನ ಅಭಿಮಾನಿಗಳು ಕಾತರದಿಂದ ಕಾದು ಎದುರು ನೋಡುತ್ತಿದ್ದಾರೆ.
ತವರಿನ ಅಭಿಮಾನಿಗಳಿಂದ ಧೋನಿ ಗೆ ಭರ್ಜರಿ ವೆಲ್ಕಮ್
ಮೊನ್ನೆ ಆಸಿಸ್ ವಿರುದ್ಧ ಆಡಲು ರಾಂಚಿ ವಿಮಾನ ನಿಲ್ದಾಣಕ್ಕೆ ಬಂದಾಗ ಧೋನಿ ಅಭಿಮಾನಿಗಳಿಂದ ಭರ್ಜರಿ ವೆಲ್ ಕಮ್ ಪಡೆದಿದ್ದಾರೆ. ರಾಂಚಿ ಱಂಬೊ ಧೋನಿ ಬಂದಾಗ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ರು. ತವರಿನಲ್ಲಿ ಆಡಲು ಬಂದ ಧೋನಿಗೆ ವಿಶೇಷ ಅನುಭವ ಇದಾಗಿತ್ತು.
ಹಮ್ಮರ್ ಕಾರ್ ನಲ್ಲಿ ರೈಡ್ ಮಾಡಿದ ಧೋನಿ
ಧೋನಿ ತಮ್ಮ ಸಹ ಆಟಗಾರರೊಂದಿಗೆ ರಾಂಚಿಗೆ ಬಂದಿಳಿಯುತ್ತಿದ್ದಂತೆ ತಮ್ಮ ನೆಚ್ಚಿನ ಹಮ್ಮರ್ ಕಾರ್ ನಲ್ಲಿ ಪ್ರಯಾಣ ಮಾಡಿದ್ರು. ಇವರೊಂದಿಗೆ ಕೇದಾರ್ ಜಾಧವ್ ಮತ್ತು ರಿಷಭ್ ಪಂತ್ ಕೂಡ ಹಮ್ಮರ್ ಕಾರ್ನಲ್ಲಿ ಧೋನಿ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ. ವಿಶೇಷ ಅಂದ್ರೆ ಧೊನಿ ತಾವೇ ಡ್ರೈವ್ ಮಾಡಿ ಕರೆದುಕೊಂಡು ಹೋಗಿದ್ದು ವಿಶೇಷ ಆಗಿದೆ.
ಆಟಗಾರರಿಗೆ ಧೋನಿ ದಂಪತಿಯಿಂದ ಭೋಜನ ಕೂಟ
ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರನೇ ಏಕದಿನ ಪಂದ್ಯಕ್ಕಾಗಿ ರಾಂಚಿಗೆ ಬಂದಿಳಿದಿರುವ ಟೀಂ ಇಂಡಿಯಾ ಆಟಗಾರರಿಗೆ ಧೋನಿ ದಂಪತಿ ಭೋಜನ ಕೂಟ ಏರ್ಪಡಿಸಿದ್ರು. ತವರಿನಲ್ಲಿ ನಡೆಯುತ್ತಿರೋದ್ರಿಂದ ತಂಡದ ಆಟಗಾರರಿಗೆ ಧೋನಿ ಮತ್ತು ಪತ್ನಿ ಸಾಕ್ಷಿ ಸಿಂಗ್ ಭರ್ಜರಿ ಪಾರ್ಟಿ ಕೊಟ್ಟು ಖುಷಿ ಪಡಿಸಿದ್ದಾರೆ.
ಪಾರ್ಟಿಯಲ್ಲಿ ಕ್ಯಾಪ್ಟನ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ , ಸಹಾಯಕ ಕೋಚ್ ಗಳಾದ ಸಂಜಯ್ ಬಂಗಾರ್, ಭರತ್ ಅರುಣ್ ಮತ್ತು ತಂಡದ ಎಲ್ಲ ಆಟಗಾರರು ಭಾಗವಹಿಸಿ ಎಂಜಾಯ್ ಮಾಡಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ತವರಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ನಿನ್ನೆ ತಾನೆ ಆಟಗಾರರೆಲ್ಲ ರಾಂಚಿಗೆ ಆಗಮಿಸಿದ್ರು. ಇದು ಮಾಹಿ ತವರಲ್ಲಿ ಆಡಲಿರುವ ಕೊನೆ ಏಕದಿನ ಪಂದ್ಯ ಎಂದು ಹಲವರು ಹೇಳುತಿದ್ದಾರೆ. ಹೀಗಿರುವಾಗ್ಲೆ ನಿನ್ನೆ ಧೋನಿ ಮತ್ತು ಪತ್ನಿ ಸಾಕ್ಷಿ, ಟೀಂ ಇಂಡಿಯಾ ಆಟಗಾರರಿಗೆ ವಿಶೇಷ ಔತಣ ಕೂಟ ಏರ್ಪಡಿಸಿದ್ರು. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಧೋನಿ ಔತಣ ಕೂಟ ಏರ್ಪಡಿಸಿದ್ದು ಯಾಕೆ ಅನ್ನೊದೆ ಈಗ ಅಭಿಮಾನಿಗಳ ಪ್ರಶ್ನೆಯಾಗಿದೆ.
ಎಲೈಟ್ ಕ್ಲಬ್ ಸೇರಲಿದ್ದಾರೆ ರಾಂಚಿ ಱಂಬೊ ಮಾಹಿ
ಇಂದು ಧೋನಿ ತಮ್ಮ ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಧೋನಿ 33 ರನ್ ಗಳಿಸಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 17 ಸಾವಿರ ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ. ಈ ಹಿಂದೆ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
ಒಟ್ನಲ್ಲಿ ತವರಿನಲ್ಲಿ ಆಡುತ್ತಿರುವ ಧೋನಿಗೆ ಇಂದು ನಡೆಯುವ ಆಸಿಸ್ ವಿರುದ್ಧದ ಪಂದ್ಯ ಈ ಹಿಂದಿನ ಎಲ್ಲ ಪಂದ್ಯಗಳಿಗಿಂತ ವಿಶೇಷವಾಗಿದೆ.