ಲಾರಿಯಲ್ ಭಾರತೀಯ ಹೇರ್‍ಡ್ರೆಸಿಂಗ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಲೋನ್ ಸರಣಿ: ದಕ್ಷಿಣ ಪ್ರಶಸ್ತಿಯನ್ನು ಗೆದ್ದ ವೈಎಲ್‍ಜಿ

ಬೆಂಗಳೂರು: ಮುಂಚೂಣಿ ಸೌಂದರ್ಯ ಹಾಗೂ ಕ್ಷೇಮಾಭಿವೃದ್ಧಿ ಬ್ರ್ಯಾಂಡ್‍ಗಳಲ್ಲಿ ಒಂದಾದ ವೈಎಲ್‍ಜಿ ಸಲೋನ್ಸ್, 2019ರ ಫೆಬ್ರವರಿ 6ರಂದು ದುಬೈನಲ್ಲಿ ನಡೆದ ಲಾರಿಯಲ್ ಭಾರತೀಯ ಹೇರ್‍ಡ್ರೆಸಿಂಗ್ ಪ್ರಶಸ್ತಿ(2018-19)ರಲ್ಲಿ ಅತ್ಯುತ್ತಮ ಸಲೋನ್ ಸರಣಿ:ದಕ್ಷಿಣ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಲಾರಿಯಲ್ ವೃತ್ತಿಪರ ಭಾರತೀಯ ಹೇರ್‍ಡ್ರೆಸಿಂಗ್ ಪ್ರಶಸ್ತಿಗಳು, ಹೇರ್‍ಡ್ರೆಸಿಂಗ್‍ನ ಕಲೆ ಮಾತ್ರವಲ್ಲದೆ ವ್ಯಾಪಾರದಲ್ಲೂ ಉತ್ಕೃಷ್ಟತೆಯನ್ನು ಗುರುತಿಸುತ್ತದೆ. ವೃತ್ತಿಯಾಗಿ ಇಂದು ಹೇರ್‍ಡ್ರೆಸಿಂಗ್ ಕೇವಲ ಸೃಜನಶೀಲತೆ ಮಾತ್ರವಲ್ಲದೆ ವಾಣಿಜ್ಯಕರವಾಗಿಯೂ ಯಶಸ್ವಿಯಾದುದು ಎಂದು ನಂಬಲಾಗಿದೆ.

ಈ ಸಾಧನೆಯ ಬಗ್ಗೆ ಮಾತನಾಡಿದ ವೈಎಲ್‍ಜಿ ಸಲೋನ್ಸ್ ಹಾಗು ವೈಎಲ್‍ಜಿ ಇನ್ಸ್ಟಿಟ್ಯೂ ಟ್‍ನ ಸಿಇಒ ಹಾಗೂ ಸಹಸ್ಥಾಪಕರಾದ ರಾಹುಲ್ ಬಾಲಚಂದ್ರ “ಕಳೆದ ತಿಂಗಳು ನಮಗೆ ಭಾರತೀಯ ರೀಟೇಲ್ ಪ್ರಶಸ್ತಿಗಳನ್ನು ನೀಡಗಿತ್ತು. ಈಗ ಸೌಂದರ್ಯ ಕ್ಷೇತ್ರದ ಉದ್ಯಮದಲ್ಲಿ ಅತ್ಯುತ್ತಮ ಪ್ರತಿಭೆಯನ್ನು ಪೋಷಿಸಿ ಅಭಿವೃದ್ಧಿಪಡಿಸುವ ಮೂಲಕ ನಾವು ಈ ಕ್ಷೇತ್ರವನ್ನು ಮಾಡಿರುವ ಸಾಧನೆಗೆ ಅತ್ಯುತ್ತಮ ಸಲೋನ್ ಸರಣಿ:ದಕ್ಷಿಣ ಪ್ರಶಸ್ತಿಯನ್ನು ನೀಡಿರುವುದು ನನಗೆ ಬಹಳ ಖುಷಿಯಾಗಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನಮಗಿದು ಸ್ಫೋರ್ತಿಯಾಗುತ್ತದೆ ಎಂದು ಹೇಳಿದರು.

ಸಹ ಸ್ಥಾಪಕರಾದ ವೈಜಯಂತಿ ಬಾಲಚಂದ್ರ “ ಈ ಪ್ರಶಸ್ತಿಯು ನಮಗೆ ಪ್ರೋತ್ಸಾಹದಾಯಕವಾಗಿದ್ದು, ಕೇವಲ ಉತ್ತಮವಾದುದನ್ನು ಮಾತ್ರವಲ್ಲ, ಅದ್ಭುತವಾದುದನ್ನು ಸಾಧಿಸುವ ನಮ್ಮ ಪ್ರಯತ್ನವನ್ನು ಇನ್ನೂ ಹೆಚ್ಚಿನ ಉತ್ಸಾಹದಿಂದ ಮುಂದುವರಿಸಿಕೊಂಡು ಹೋಗಲು ನೆರವಾಗುತ್ತದೆ.” ಎಂದು ಹೇಳಿದರು.

ಸೌಂದರ್ಯ ಉದ್ಯಮದಲ್ಲಿ ಮುಂದಾಳುವಾದ ವೈಎಲ್‍ಜಿ, ಬೆಂಗಳೂರು, ಚೆನ್ನೈ, ಮತ್ತು ಹೈದರಾಬಾದ್‍ಗಳಲ್ಲಿ 62ಕ್ಕಿಂತ ಹೆಚ್ಚಿನ ಸಲೋನ್‍ಗಳನ್ನು ಹೊಂದಿದ್ದು, 5,00,000ಕ್ಕಿಂತ ಹೆಚ್ಚಿನ ವಿಶ್ವಸನೀಯ ಗ್ರಾಹಕರನ್ನು ಹೊಂದಿದೆ. 2009ರಲ್ಲಿ ಆರಂಭವಾದಾಗಿನಿಂದಲೂ ವೈಎಲ್‍ಜಿ ತನ್ನ ಮುಂದಿನ ಪೀಳಿಗೆಯ ನೋವುರಹಿತ ವ್ಯಾಕ್ಸ್ ಮತ್ತು ವಿವಿಧ ಪ್ರದೇಶಗಳಾದ್ಯಂತ ತರಬೇತಿ ಮತ್ತು ನಿರಂತರ ಒದಗಣೆಯಲ್ಲಿ ಉದ್ಯಮ ಮುಂದಾಳತ್ವದ ಮೂಲಕ ಭಾರತದಾದ್ಯಂತ ಸೌಂದರ್ಯ ಸೇವೆಗಳನ್ನು ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ