ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೆ ಅಂತಿಮ ಟೆಸ್ಟ್ ಪಂದ್ಯ ನಾಳೆ ರಾಂಚಿಯಲ್ಲಿ ನಡೆಯಲಿದೆ.
ಈಗಾಗಲೇ ಸತತ ಎರಡು ಪಂದ್ಯಗಳನ್ನ ಗೆದ್ದಿರುವ ಟೀಂ ಇಂಡಿಯಾ ನಾಳಿನ ಪಂದ್ಯವನ್ನು ಗೆದ್ದು ಸರಣಿಯನ್ನ ಕೈವಶ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿದೆ.
ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರೋದು ನಾಯಕ ಕೊಹ್ಲಿಯ ಚಿಂತೆಗೀಡು ಮಾಡಿದೆ. ಇನ್ನು ಬೌಲಿಂಗ್ ವಿಭಾಗದಲ್ಲೂ ಸ್ವಲ್ಪ ಸುಧಾರಿಸಿಕೊಳ್ಳಬೇಕಿದೆ.
ಆಲ್ರೌಂಡರ್ ವಿಜಯ್ ಶಂಕರ್ ಆಲ್ರೌಂಡ್ ಪ್ರದರ್ಶನ ನೀಡುತ್ತಿರೋದು ತಂಡದ ಗೆಲುವಿಗೆ ಸಹಕಾರಿಯಾಗಿದೆ.
ಇತ್ತ ಆಸ್ಟ್ರೇಲಿಯಾ ತಂಡ ಸತತ ಎರಡು ಪಂದ್ಯಗಳ ಸೋಲಿನಿಂದ ಕೆಂಗೆಟ್ಟಿದೆ. ಮೊನ್ನೆ ನಾಗ್ಪುರ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಕೊನೆಯ ಕ್ಷಣದಲ್ಲಿ ಅದೃಷ್ಟ ಕೈಕೊಟ್ಟಿತ್ತು.