ಶ್ರೀರಂಗಪಟ್ಟಣ, ಮಾ.7- ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಛಾವಣಿ ಬೆಂಕಿಗೆ ಆಹುತಿಯಾಗಿ ಬೆಲೆಬಾಳುವ ವಸ್ತುಗಳು ಸುಟ್ಟುಹೋಗಿರುವ ಘಟನೆ ಪಟ್ಟಣದ ರಂಗನಾಥ ನಗರದಲ್ಲಿ ನಡೆದಿದೆ..
ದಿ.ಹೊಂಬಯ್ಯ ಅವರ ಪತ್ನಿ ಪುಟ್ಟಸಿದ್ದಮ್ಮ ಅವರಿಗೆ ಸೇರಿದ ಮನೆಯ ಹಜಾರದಲ್ಲಿ ಇಟ್ಟಿದ್ದ ಸಿಲಿಂಡರ ಸ್ಫೋಟಗೊಂಡು ಹೆಂಚಿನ ಮನೆಯ ಅರ್ಧದಷ್ಟು ತೊಲೆ ಜಂತಿಗಳು ಸುಟ್ಟಿವೆ. ಮನೆಯೊಳಗಿದ್ದ ಬೀರು ಹಾಗೂ ಅದರೊಳಗಿದ್ದ ಚಿನ್ನಾಭರಣ ,ರೇಷ್ಮೆ ಸೀರೆ , ಬಹುಮುಖ್ಯ ದಾಖಲೆ ಪತ್ರಗಳು ಹಾಗೂ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿವೆ. ಆದರೆ ಅದೃಷ್ಟವಶಾತ್ ಮನೆಯೊಳಗೆ ಮಲಗಿದ್ದ ಪುಟ್ಟಸಿದ್ದಮ್ಮ , ಅವರ ಮಗ ಡಾ.ಅರ್ಜುನ್ ಕುಮಾರ್ ಮತ್ತು ಪತ್ನಿ ಶಿಲ್ಪ ಸೇರಿದಂತೆ ಮೂರು ವರ್ಷದ ಮಗು ಸೇರಿದಂತೆ ಕೂಡಲೇ ಮನೆಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಅಕ್ಕ ಪಕ್ಕ ಮನೆಗಳಿಗೆ ಬೆಂಕಿ ಹರಡದಂತೆ ತಡೆದು ನಂದಿಸಿದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಕಾಂಗ್ರೆಸï ಮುಖಂಡ ರಮೇಶ ಬಂಡಿಸಿದ್ದೇಗೌಡ ಪುಟ್ಟಸಿದ್ದಮ್ಮ ಅವರಿಗೆ ವೈಯಕ್ತಿಕ ಪರಿಹಾರ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ಸದಸ್ಯರಾದ ಪ್ರಕಾಶï,ನಳಿನಾ,ಕಾಯಿ ವೆಂಕಟೇಶ್,ಎಸ್ ಐ ಮುದ್ದುಮಾದಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.