ಲಂಡನ್, ಮಾ.5-ಆರೋಗ್ಯ ಕ್ಷೇತ್ರದ ಮಹಾ ಹೆಮ್ಮಾರಿ ಎಂದೇ ಬಣ್ಣಿಸಲಾದ ಮಾರಕ ಏಡ್ಸ್ ರೋಗ ನಿವಾರಣೆ ನಿಟ್ಟಿಯಲ್ಲಿ ಭರವಸೆಯ ಆಶಾಕಿರಣವೊಂದು ಮೂಡಿದೆ. ಬ್ರಿಟನ್‍ನ ಎಚ್‍ಐವಿ ಪೀಡಿತ ವ್ಯಕ್ತಿಯನ್ನು ಈಗ ಏಡ್ಸ್ ವೈರಸ್‍ನಿಂದ ಸಂಪೂರ್ಣ ಮುಕ್ತಗೊಳಿಸಲಾಗಿದೆ.
ಏಡ್ಸ್ ವೈರಾಣುವಿನೀದ ಮುಕ್ತನಾದ ವಿಶ್ವದ ಎರಡನೆ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಲಂಡನ್‍ನ ಎಚ್‍ಐವಿ ಬಾಧಿತ ಪಾತ್ರನಾಗಿದ್ದಾನೆ.
ಎಚ್‍ಐವಿ ಪ್ರತಿರೋಧಿದ ದಾಳಿಯಿಂದ ಪಡೆಯಲಾದ ಬೋನ್ ಮ್ಯಾರೋ(ಅಸ್ಥಿ ರಜ್ಜೆ) ಟ್ರಾನ್ಸ್‍ಫ್ಲಾಂಟ್(ಕಸಿ) ಚಿಕಿತ್ಸೆ ನಂತರ ಲಂಡನ್‍ನ ಈ ವ್ಯಕ್ತಿ ಪೂರ್ಣವಾಗಿ ಏಡ್ಸ್ ವೈರಸ್‍ನಿಂದ ಮುಕ್ತನಾಗಿರುವುದು ಇಲ್ಲಿ ಗಮನಾರ್ಹ. ಎಂದು ವೈದ್ಯರು ತಿಳಿಸಿದ್ದಾರೆ.
ಎಚ್‍ಐವಿ ಸೋಂಕನ್ನು ಪ್ರತಿರೋಧಿಸುವ ವಿರಳ ವಂಶವಾಹಿ ಪರಿವರ್ತನೆ ಗುಣ ಹೊಂದಿರುವ ದಾನಿಯ ಸ್ಟೇಮ್ ಸೆಲ್‍ಗಳಿಂದ(ಆಕರಕೋಶಗಳು) ಎಲುಬು ಸ್ವೀಕರಿಸಿ ಲಂಡನ್‍ನ ಎಚ್‍ಐವಿ ಬಾಧಿತನಿಗೆ ಮೂರು ವರ್ಷಗಳ ಹಿಂದೆ ಕಸಿ ಮಾಡಲಾಗಿತ್ತು. ರೋಗ ನಿವಾರಣೆಯ ಪ್ರಬಲ ಪ್ರತಿರೋಧಕ ಔಷಧಗಳನ್ನು ನೀಡಿದ 18 ತಿಂಗಳುಗಳ ತರುವಾಯ ಇದು ಫಲ ನೀಡಿದೆ. ಎಚ್‍ಐವಿ ಬಾಧಿತ ವ್ಯಕ್ತಿಯಲ್ಲಿ ಈ ಹಿಂದೆ ಇದ್ದ ಏಡ್ಸ್‍ಕಾರಕ ವೈರಾಣುಗಳು ಸಂಪೂರ್ಣ ನಿರ್ಮೂಲನೆಯಾಗಿವೆ ಆತನನ್ನು ವಿವಿಧ ಪ್ರಯೋಗ ಮತ್ತು ಪರೀಕ್ಷೆಗಳಿಗೆ ಒಳಪಡಿಸಿದ ನಂತರ ವ್ಯಕ್ತಿಯ ಶರೀರದಲ್ಲಿ ಅಪಾಯಕಾರಿ ವೈರಾಣುಗಳು ಇಲ್ಲದಿರುವುದು ಕಂಡುಬಂದಿದೆ ಎಂದು ಈ ವ್ಯಕ್ತಿಗೆ ಚಿಕಿತ್ಸೆ ನೀಡಿದ ತಜ್ಞ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಹಿರಿಯ ಪ್ರೊಫೆಸರ್ ಮತ್ತು ಎಚ್‍ಐವಿ ಜೀವಶಾಸ್ತ್ರಜ್ಞ ಡಾ. ರವೀಂದ್ರ ಗುಪ್ತ ವಿವರಿಸಿದ್ದಾರೆ.
ಇದೊಂದು ಅತ್ಯಂತ ವಿರಳಾತಿ ವಿರಳ ವೈದ್ಯಕೀಯ ಸಂಶೋಧನೆಯಾಗಿದೆ. ಈ ಪ್ರಕರಣವು ಶತಮಾನದ ಹೆಮ್ಮಾರಿ ಏಡ್ಸ್ ನಿರ್ಮೂಲನೆ ಮಾಡಲು ಮುಂದೊಂದು ದಿನ ವೈದ್ಯರು ಮತ್ತು ವಿಜ್ಞಾನಿಗಳಿಗೆ ನೆರವಾಗುವ ಆಶಾದಾಯಕ ಪರಿಕಲ್ಪನೆಯ ಪರೀಕ್ಷೆ ಎನಿಸಿದೆ. ಆದರೆ ಈ ಪ್ರಯೋಗ ಇನ್ನೂ ಶೈಶಾವಸ್ಥೆಯಲ್ಲಿದ್ದು, ದೊಡ್ಡ ಮಟ್ಟದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಳು ನಡೆಯುವ ಅಗತ್ಯವಿದೆ ಎಂದು ನುರಿತ ತಜ್ಞರು ಹೇಳುತ್ತಾರೆ.