ಸಾಂಬಾ, ಮಾ.6- ಜಮ್ಮು-ಕಾಶ್ಮೀರದಲ್ಲಿ ಸೇನೆಯ ಬಗ್ಗೆ ಪ್ರತ್ಯೇಕವಾದಿಗಳು ಏನೇ ಹೇಳಿಕೊಳ್ಳಲಿ. ಆದರೆ, ಭಾರತೀಯ ಸೇನೆಯ ನಡೆ ವಿಶ್ವಕ್ಕೇ ಮಾದರಿ.
ತಾಯ್ನಾಡಿನಲ್ಲಿದ್ದುಕೊಂಡೇ ದ್ರೋಹ ಬಗೆಯುವ ಆದಿಲ್ ಧರ್‍ನಂತಹ ಪಾತಕಿಗಳೂ ಇರುವ ಕಾಶ್ಮೀರದಲ್ಲಿ ಸೇನೆ ಮಾತ್ರ ಸದ್ಭಾವನೆ ಮೂಡಿಸುವ ಕಾರ್ಯ ಮಾಡುತ್ತಲೇ ಇರುತ್ತದೆ.
ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಬಾರಿಖಾದ್‍ನ ಮಿಲಟರಿ ಸ್ಕೂಲ್ ಬಿಲ್ಡಿಂಗ್‍ಗೆ ಕುಡಿಯುವ ನೀರಿನ ಟ್ಯಾಂಕ್, ವಾಟರ್ ಕೂಲರ್, ಡೆಸ್ಕ್ ಹಾಗೂ 4 ಕಂಪ್ಯೂಟರ್ ಕೊಟ್ಟಿರುವ ಭಾರತೀಯ ಸೇನೆ ಮಕ್ಕಳು ಹಾಗೂ ಪೋಷಕರ ಪ್ರೀತಿ ಗಳಿಸಿದೆ.
ಭಾರತೀಯ ಆಪರೇಷನ್ ಸಬ್ಭಾವನಾ ಅಡಿ ಮಕ್ಕಳ ಭವಿಷ್ಯಕ್ಕೆ ನೆರವಾಗಲು ಇಂಥ ಮಾನವೀಯ ಕಾರ್ಯ ಮಾಡುತ್ತಿದೆ. ಸ್ವತಃ ಸೇನಾ ಅಧಿಕಾರಿಗಳೇ ತೆರಳಿ ಶಾಲೆ ಕಟ್ಟಡವನ್ನು ಮಕ್ಕಳಿಂದಲೇ ಉದ್ಘಾಟಿಸಿದ್ದಾರೆ. ಅಷ್ಟೇ ಅಲ್ಲ, ಕಂಪ್ಯೂಟರ್ ಶಿಕ್ಷಣದ ಬಗ್ಗೆ ಕಣಿವೆ ರಾಜ್ಯದ ಮಕ್ಕಳಿಗೆ ಹೇಳಿ ಕೊಟ್ಟಿದ್ದಾರೆ.
ಸದಾ ಗುಂಡಿನ ಮೊರೆತ, ಉಗ್ರರ ಅಟ್ಟಹಾಸ. ಶಸ್ತ್ರ ಸಜ್ಜಿತ ಸೇನೆಯನ್ನೇ ಹೆಚ್ಚು ನೋಡುವ ಇಲ್ಲಿನ ಜನರಿಗೆ, ಶಿಕ್ಷಣದ ವಾತಾವರಣ ಕಲ್ಪಿಸುತ್ತಿರುವ ಸೇನಾಧಿಕಾರಿಗಳ ನಡೆ ಮೆಚ್ಚುಗೆ ತರಿಸಿದೆ.
ಗನ್ ಹಿಡಿಯದಿರಲಿ ಅಂತಹ ಮಕ್ಕಳ ಕೈಗೆ ಸೇನೆಯೇ ಪೆನ್ನು ನೀಡಿದೆ. ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತಿದೆ. ಇದು ಭಾರತೀಯ ಸೇನೆಯ ಶ್ರೇಷ್ಠತೆ, ಘನತೆಯನ್ನು ಎತ್ತಿ ತೋರಿಸಿದ ನಡೆಯಾಗಿದೆ.