ಭಯೋತ್ಪಾದಕರ ವಿರುದ್ಧ ಆಕ್ರಮಣ ನಡೆಸುವುದಾಗಿ ಪಾಕ್‍ಗೆ ಇರಾನ್ ಎಚ್ಚರಿಕೆ

ಟೆಹ್ರಾನ್, ಮಾ.5- ಪಾಕಿಸ್ತಾನ ನೆಲಕ್ಕೆ ನುಗ್ಗಿ ಉಗ್ರರ ಕ್ಯಾಂಪ್‍ಗಳ ಮೇಲೆ ಭಾರತೀಯ ವಾಯುಸೇನೆ ವಾಯುದಾಳಿ ನಡೆಸಿದ ಬೆನ್ನಲ್ಲೇ ನೆರೆಯ ಇರಾನ್ ಸಹ ಭಯೋತ್ಪಾದಕರ ವಿರುದ್ಧ ಆಕ್ರಮಣ ನಡೆಸುವುದಾಗಿ ಪಾಕ್‍ಗೆ ಎಚ್ಚರಿಕೆ ನೀಡಿದೆ. ಉಗ್ರ ಸಂಘಟನೆಗಳನ್ನು ಹತ್ತಿಕ್ಕಿ ಇಲ್ಲದಿದ್ದರೆ ಪಾಕ್‍ನೊಳಗೆ ನುಗ್ಗಿ ಭಯೋತ್ಪಾದಕರನ್ನು ಸದೆಬಡೆಯುವುದಾಗಿ ಎಂದು ತಿಳಿಸಿದೆ.

ಇರಾನ್ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು ನೆರೆಯ ರಾಷ್ಟ್ರಗಳ ಜೊತೆ ನಿಮ್ಮ ಬಾಂಧವ್ಯ ಹೇಗಿದೆ ಎಂಬುವುದು ಗೊತ್ತಿದೆ. ಎಲ್ಲಿ ನೋಡಿದರೂ ಅಶಾಂತಿ ಸೃಷ್ಟಿಸುವುದೇ ನಿಮ್ಮ ಕಾಯಕವಾಗಿದೆ ಎಂದು ಪಾಕ್ ವಿರುದ್ಧ ಇರಾನ್ ವಾಗ್ದಾಳಿ ನಡೆಸಿದೆ. ಪಾಕ್ ಜೊತೆ ತಾನೂ ಹೊಂದಿರುವ ಗಡಿ ಪ್ರದೇಶದಲ್ಲಿ ಬೃಹತ್ ಗೋಡೆ ನಿರ್ಮಿಸಲು ಇರಾನ್ ಸಂಸತ್‍ನಲ್ಲೂ ಪ್ರಸ್ತಾಪವಾಗಿದೆ.

ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಗಳು ಇರಾನ್‍ನಲ್ಲೂ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದು ಒಂದೊಮ್ಮೆ ನೀವು ಕ್ರಮ ಕೈಗೊಳ್ಳಲಿದ್ದಾರೆ ನಾವೇ ಉಗ್ರರ ನೆಲೆಗಳನ್ನು ನಾಶ ಪಡಿಸುತ್ತೇವೆ. ನಮ್ಮ ಸಂಯಮಗಳನ್ನು ಪರೀಕ್ಷೆ ಮಾಡಲು ಮುಂದಾಗ ಬೇಡಿ. ನಿಮ್ಮ ಉಪಟಳದಿಂದ ತೊಂದರೆಗೆ ಒಳಗಾದದ ಒಂದೇ ಒಂದು ನೆರೆ ದೇಶವೂ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.

ಪಾಕ್ ಉಗ್ರರ ವಿರುದ್ಧ ಅದರ ನೆಲದಲ್ಲಿ ದಾಳಿ ನಡೆಸಿ ಮಟ್ಟ ಹಾಕುವುದಾಗಿ ಇರಾನ್ ಗಂಭೀರ ಎಚ್ಚರಿಕೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ