ಬೆಂಗಳೂರು-ಪುಣೆ ನಡುವೆ ಅನುಮಾನಾಸ್ಪದ ಕಾರು ಓಡಾಟ; ಕಟ್ಟೆಚ್ಚರ ವಹಿಸುವಂತೆ ಬೆಂಗಳೂರು ಪೊಲೀಸರಿಗೆ ಗುಪ್ತಚರ ಇಲಾಖೆ ಸೂಚನೆ

ನವದೆಹಲಿ: ಬೆಂಗಳೂರು ಹಾಗೂ ಪುಣೆ ನಡುವೆ ಅನುಮಾನಾಸ್ಪದವಾಗಿ ಕಾರೊಂದು ಓಡಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದ್ದು, ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಈ ಕಾರು ಮಾಚ್ 1 ರಂದು ಪುಣೆ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಟ ಮಾಡಿದ್ದು, ಇದೀಗ ಬೆಂಗಳೂರಿನತ್ತ ತೆರಳಿದೆ ಅನ್ನೋ ಮಾಹಿತಿ ಲಭಿಸಿದೆ. ಹೀಗಾಗಿ ಇಲ್ಲಿನ ಪೊಲೀಸರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆಯನ್ನು ಗುಪ್ತಚರ ಇಲಾಖೆ ನೀಡಿದೆ.

ಟೊಯೋಟಾ ಇನ್ನೋವಾ ಕಾರಿನಲ್ಲಿ 6 ಮಂದಿ ಇದ್ದಾರೆ. ಈ ಕಾರಿಗೆ ಪೊಲೀಸ್ ಲಾಂಛನ ಇರುವ ಬಗ್ಗೆಯೂ ಮಾಹಿತಿ ಇದೆ. ಮುಂಬೈ ಪೊಲೀಸರಿಗೂ ಅನುಮಾನಾಸ್ಪದ ವಾಹನ ಹಾಗೂ ವ್ಯಕ್ತಿಗಳ ಬಗ್ಗೆ ಮಾಹಿತಿ ರವಾನಿಸಲಾಗಿದ್ದು, ಅಲ್ಲಿಯೂ ಕೂಡ ಬಿಗಿ ಭದ್ರತೆ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಮಹಾರಾಷ್ಟ್ರ ನೋಂದಣಿ ಇರುವ ಈ ಕಾರು ಪುಣೆಯ ಡಿಆರ್ ಡಿಒ ಕಾಂಪ್ಲೆಕ್ಸ್ ನಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಅಲ್ಲಿಂದ ಬೆಂಗಳೂರಿಗೆ ಹೊರಟಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮುಂಬೈ- ಪುಣೆ ಹಾಗೂ ಬೆಂಗಳೂರು ಈ ಮೂರು ನಗರಗಳಲ್ಲಿ ಏನಾದ್ರೂ ಅನಾಹುತ ಸಂಭವಿಸುವ ಮೊದಲೇ ಬಿಗಿ ಭದ್ರತೆ ಕೈಗೊಳ್ಳಿ ಎಂದು ಗುಪ್ತರ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ