ಮಂಡ್ಯ: ಮದ್ದೂರು ತಾಲೂಕಿನ ಗುಡಿಗೆರೆ ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಬ್ಯಾಂಕ್ ಖಾತೆಗೆ ಹರಿದು ಬಂದ ಹಣ ಹಂಚಿಕೆ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಸೃಷ್ಟಿಯಾಗಿರೋ ಬಗ್ಗೆ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಹಾಗೂ ತಾಯಿ ಚಿಕ್ಕತಾಯಮ್ಮ ನಮ್ಮ ಕುಟುಂಬದಲ್ಲಿ ಯಾವುದೇ ಒಡಕಿಲ್ಲ, ಕೆಲವರು ನಮ್ಮ ವಿರುದ್ಧ ಅಪಪ್ರಚಾರ ಆರೋಪ ಮಾಡ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಅಲ್ದೇ, ಇಂತಹ ಅಪಪ್ರಚಾರವನ್ನು ಯಾರು ನಂಬಬೇಡಿ ಅಂತ ಹುತಾತ್ಮ “ಯೋಧ ಗುರು”ರವರ ಕುಟುಂಬ ಮನವಿ ಮಾಡಿದರು.
ನಾನು-ನನ್ನ ಸೊಸೆ ಅಮ್ಮ ಮಗಳ ರೀತಿ ಇದ್ದೀವಿ. ನಮ್ಮಲ್ಲಿ ಯಾವುದೇ ಜಗಳ ಇಲ್ಲ. ಯಾರ ತಲೆ ಮೇಲಾದರೂ ಬೇಕಾದರೆ ಪ್ರಮಾಣ ಮಾಡಿ ಹೇಳ್ತೀನಿ. ನಾವೆಲ್ಲಾ ಒಟ್ಟಾಗಿ ಇದ್ದೀವಿ. ಒಂದು ವಾರ ಅನ್ನ ತಿನ್ನೋಕೂ ಆಗದ ಸ್ಥಿತಿ ಇತ್ತು. ಈಗ ಸರ್ಕಾರ ಉದ್ಯೋಗ ಕೊಡ್ತೀನಿ ಅಂತಾ ಹೇಳಿದೆ. ನನಗೆ ಹಣ ಬೇಡ ಏನೂ ಬೇಡ ನಮ್ಮ ಗೌರವ ಉಳಿಸಿಕೊಳ್ತೀನಿ ಅಂತಾ ಚಿಕ್ತಾಯಮ್ಮನವರು ಕಣ್ಣೀರಿಟ್ಟರು.
ಒಂದು ಕಡೆ ಮಗನನ್ನ ಕಳೆದುಕೊಂಡಿದ್ದು ನೋವು ಆಗ್ತಿದೆ. ಇನ್ನೊಂದೆಡೆ ಜನರ ಮಾತಿನಿಂದ ಮತ್ತೆ ನೋವು ಆಗ್ತಿದೆ. ದಯವಿಟ್ಟು ಇದನ್ನೆಲ್ಲಾ ಯಾರೂ ನಂಬಬೇಡಿ. ಜನರು ಹೊರಿಸಿರೋ ಈ ಅಪರಾಧದ ಚುಕ್ಕಿಯನ್ನ ಅಳಿಸಿಕೊಡಿ ಎಂದು ಕೈ ಮುಗಿದು ಕಣ್ಣೀರಿಟ್ಟರು …