ಶ್ರೀರಂಗಪಟ್ಟಣ, ಮಾ.2- ಶ್ರೀರಂಗಪಟ್ಟಣದ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲುಗಳು ನಿಲುಗಡೆ ಮಾಡುವಂತೆ ಒತ್ತಾಯಿಸಿ ಸ್ಥಳೀಯರು ನೈರತ್ಯ ರೈಲ್ವೆ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ಅವರಿಗೆ ಮನವಿ ಮಾಡಿದರು.
ಪಟ್ಟಣದ ಹೊರವಲಯದಲ್ಲಿರುವ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ರಾಂಪುರ ರೈಲ್ವೆ ರಸ್ತೆಯಿಂದ ದಕ್ಷಿಣ ಕಾವೇರಿ ರೈಲು ರಸ್ತೆಯವರೆಗೆ ಅಳವಡಿಸಿರುವ ಲೋಹದ ತಡೆಗೋಡೆಗಳ ಕಾಮಗಾರಿ ಪರೀಶೀಲನೆಗೆ ಆಗಮಿಸಿದ್ದ ವೇಳೆ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು.
ಶ್ರೀರಂಗಪಟ್ಟಣವು ಇತಿಹಾಸ ಪ್ರಸಿದ್ಧ ತಾಣವಾಗಿರುವುದರಿಂದ ದೇಶ-ವಿದೇಶಗಳಿಂದ ಪ್ರವಾಸಿಗರು ಇಲ್ಲಿನ ಸ್ಮಾರಕಗಳನ್ನು ವೀಕ್ಷಿಸಲು ಆಗಮಿಸುತ್ತಾರೆ.
ಎಕ್ಸ್‍ಪ್ರೆಸ್ ರೈಲುಗಳು ನಿಲುಗಡೆ ಮಾಡದಿರುವ ಕಾರಣ ಸಾರಿಗೆ ವಾಹನಗಳಲ್ಲಿಯೇ ಬರಬೇಕಾದ ಅನಿವಾರ್ಯತೆ ಇರುವುದರಿಂದ ಪ್ರವಾಸಿಗರ ಅನುಕೂಲಕೋಸ್ಕರ ಶ್ರೀರಂಗಪಟ್ಟಣದಲ್ಲಿ ಎಕ್ಸ್‍ಪ್ರೆಸ್ ರೈಲುಗಳು ನಿಲುಗಡೆ ಮಾಡುವಂತೆ ಕ್ರಮ ವಹಿಸಬೇಕೆಂದು ಸ್ಥಳೀಯ ಪುರಸಭೆ ಸದಸ್ಯ ಎಸ.ಪ್ರಕಾಶ, ವೆಂಕಟೇಶ್, ನಂದೀಶ್, ಕಸಾಪ ನಗರ ಘಟಕ ಅಧ್ಯಕ್ಷ ಕೆ.ಬಿ.ಬಸವರಾಜು , ಸಾಮಾಜಿಕ ಕಾರ್ಯಕರ್ತ ಚಂದನ ಹಾಗೂ ಇತರರು ಸೇರಿ ಮನವಿ ಸಲ್ಲಿಸಿದರು.