ದೇವಸ್ಥಾನದ ಬೀಗ ಮುರಿದು ವಿಗ್ರಹವನ್ನು ಕದ್ದ ಕಳ್ಳರು

ದಾವಣಗೆರೆ, ಮಾ.1- ದೇವಸ್ಥಾನದ ಬೀಗ ಮುರಿದು ದುಷ್ಕರ್ಮಿಗಳು ನಂದಿ ವಿಗ್ರಹವನ್ನು ಕದ್ದೊಯ್ದಿರುವ ಘಟನೆ ಬಸವಪಟ್ಟಣದ ಚಿನ್ಮೂಲಾದ್ರಿ ಬೆಟ್ಟದ ದೇವಾಲಯದಲ್ಲಿ ನಡೆದಿದೆ.

ನಾಲ್ಕೈದು ಜನರ ದುಷ್ಕರ್ಮಿಗಳ ತಂಡ ರಾತ್ರಿ ದೇವಾಲಯದ ಬೀಗ ಮುರಿದು ನಂದಿ ವಿಗ್ರಹವನ್ನು ಹೊತ್ತೊಯ್ದಿದ್ದು, ಇಂದು ಬೆಳಗ್ಗೆ ಪೂಜೆಗೆ ಅರ್ಚಕರು ಆಗಮಿಸಿದಾಗ ಕಳ್ಳತನ ವಾಗಿರುವುದು ಬೆಳಕಿಗೆ ಬಂದಿದೆ.

ನಿಧಿಯಾಸೆಗಾಗಿ ಪುರಾತನ ನಂದಿ ವಿಗ್ರಹ ಕಳ್ಳತನ ಮಾಡಿರಬಹುದೆಂದು ಶಂಕಿಸಲಾಗಿದ್ದು, ಬಸವಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ