ನೀನೇ ಅಲ್ಲಾಹು-ನೀನೇ ರಾಮನೂ.. ‘ಅಯೋಧ್ಯೆಯಿಂದಲೇ ಮಸೀದಿ ಬೇರೆಡೆ ಶಿಫ್ಟಾಗಲಿ..’

ಲಖನೌ: ದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಅಯೋಧ್ಯೆಯಲ್ಲಿನ ವಿವಾದಿತ ಜಾಗದಿಂದ ಬಾಬ್ರಿ ಮಸೀದಿಯನ್ನ ಬೇರೆಡೆಗೆ ಸ್ಥಳಾಂತರಿಸಬೇಕು ಅಂತ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾಜಿ ಸದಸ್ಯ ಹಾಗೂ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಸಲ್ಮಾನ್‌ ನಡ್ವಿ ಹೇಳಿದ್ದಾರೆ.

ಮಾರ್ಚ್‌ 5ರಂದು ಈ ಬಗ್ಗೆ ಸುಪ್ರೀಂಕೋರ್ಟ್‌ ಆದೇಶ ನೀಡುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕೋರ್ಟ್‌ನಿಂದ ಹೊರಗಡೆಯೇ 3ನೇ ವ್ಯಕ್ತಿ ಮೂಲಕವೇ ಮಾತುಕತೆ ನಡೆಸಬೇಕು ಹಾಗೂ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕು ಅಂತ ಪದೇಪದೆ ಪ್ರಸ್ತಾವನೆ ಇರಿಸಿದ್ದಾರೆ.

ಸುಪ್ರೀಂ ತನ್ನ ಆದೇಶದಲ್ಲಿ ಏನು ಹೇಳ ಬಯಸಿದೆ ಅನ್ನೋದನ್ನ ನಾನು ಓದಿರುವೆ. ಪರಸ್ಪರರು ಥರ್ಡ್‌ ಪಾರ್ಟಿ ಮೂಲಕ ಕೂತು ರಾಮಜನ್ಮ ವಿವಾದಕ್ಕೆ ಮಾತುಕತೆಯಿಂದ ಪರಿಹಾರ ಕಂಡುಕೊಳ್ಳಬೇಕು. ಈಗಲೂ ಎರಡೂ ಪಾರ್ಟಿಗಳೂ ಒಂದೆಡೆ ಕೂತು ಈ ವಿವಾದ ಇತ್ಯರ್ಥಪಡಿಸಿಕೊಳ್ಳುತ್ತಾರೆ ಅನ್ನೋ ವಿಶ್ವಾಸವೂ ಇದೆ ಅಂತ ಮೌಲಾನಾ ಸಲ್ಮಾನ್‌ ನಡ್ವಿ ಆಶಾವಾದ ವ್ಯಕ್ತಪಡಿಸಿದ್ದಾರೆ.

ವಿವಾದಿತ ಜಾಗದಿಂದ ಮಸೀದಿ ಬೇರೆಡೆಗೆ ಶಿಫ್ಟಾಗಲಿ ಎಂಬುದು ನನ್ನ ವೈಯಕ್ತಕ ಪ್ರಸ್ತಾವ. ಎಲ್ಲಾದರೂ ಒಂದು ಕಡೆ ಅದೇ ಮಸೀದಿ ಕಟ್ಟಬೇಕು. ದೇಶದಲ್ಲಿ ಶಾಂತಿ ಹರಡಲು ವಿದ್ಯಾಸಂಸ್ಥೆಯನ್ನೂ ಅದೇ ಜಾಗದಲ್ಲಿ ತಲೆ ಎತ್ತುವಂತೆ ಮಾಡಬೇಕು. ದೇಶದಲ್ಲಿ ಹೆಚ್ಚು ಶಾಂತಿ -ಸಾಮರಸ್ಯ ಹರಡಲು ಈ ಮಸೀದಿ ನಿರ್ಮಾಣವಾಗಲಿ ಅಂತ ಮೌಲಾನಾ ನಡ್ವಿ ಹೇಳಿದ್ದಾರೆ.

ನಾನು ದೇವರನ್ನ ನಂಬುತ್ತೇನೆ. ರಾಮನೂ ಒಂದೇ.. ಅಲ್ಲಾಹುನೂ ಒಂದೇ. ಒಂದು ವೇಳೆ ಅಲ್ಲಿ ರಾಮಮಂದಿರ ಕಟ್ಟುವುದಾದರೆ ನಾವೇನೂ ಅದಕ್ಕೆ ಅಡ್ಡಿಪಡಿಸಲ್ಲ, ಸಂಘರ್ಷಕ್ಕಿಳಿಯುವುದಿಲ್ಲ. ನನ್ನ ಈ ಅಭಿಪ್ರಾಯಕ್ಕೆ ಸುನ್ನಿ ವಕ್ಫ್‌ ಬೋರ್ಡ್‌ ಬೆಂಬಲಿಸಿದೆ. ಆದ್ರೇ, ಮುಸ್ಲಿ ವೈಯಕ್ತಿಕ ಕಾನೂನು ಮಂಡಳಿ ಮಾತ್ರ ಆಕ್ಷೇಪ ಎತ್ತಿದೆ. ಒಂದು ವೇಳೆ ಮಾತುಕತೆ ನಡೆದ್ರೇ, ಅವರೂ ಕೂಡ ಈ ಪ್ರಸ್ತಾವ ಒಪ್ಪುತ್ತಾರೆ. ದೇಶಕ್ಕೆ ಒಳೀತಾಗುವುದರಿಂದ ಎಲ್ಲರೂ ಒಪ್ಪುತ್ತಾರೆ ಅಂತ ಇಸ್ಲಾಮಿಕ್ ವಿದ್ವಾಂಸ ನಡ್ವಿ ಆಶಾವಾದ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 5ರಂದು ಅಯೋಧ್ಯ ವಿವಾದಕ್ಕೆ ಸಂಬಂಧಿಸಿ ಅಂತಿಮ ತೀರ್ಪು ನೀಡುವುದಾಗಿ ಸುಪ್ರೀಂ ಫೆಬ್ರವರಿ 26ರಂದು ಹೇಳಿತ್ತು. ಒಂದು ವೇಳೆ 3ನೇ ವ್ಯಕ್ತಿ ಮೂಲಕ ಮಾತುಕತೆ ನಡೆಸಿ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಪರಿಹರಿಸಿಕೊಳ್ಳದಿದ್ರೇ, ಅಂತಿಮ ತೀರ್ಪು ನೀಡುವುದಾಗಿ ಸುಪ್ರೀಂ ಹೇಳಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ