ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವಂತೆ ಪಾಕ್ ಗೆ ಫಾತಿಮಾ ಭುಟ್ಟೋ ಮನವಿ

ವಾಷಿಂಗ್ಟನ್: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರ ಮೊಮ್ಮಗಳಾದ ಫಾತಿಮಾ ಭುಟ್ಟೋ ಮನವಿ ಮಾಡಿದ್ದಾರೆ.

ಪಾಕಿಸ್ತಾನದ ನಿರಂತರ ಸರ್ವಾಧಿಕಾರ ಆಡಳಿತ, ಭಯೋತ್ಪಾದನೆ, ಅನಿಶ್ಚಿತತೆಗೆ ದೊಡ್ಡ ಇತಿಹಾಸವೇ ಇದೆ. ನನ್ನ ಕಾಲಘಟ್ಟದ ಪಾಕಿಸ್ತಾನದ ಯುವ ಜನಾಂಗ ಇದನ್ನೆಲ್ಲಾ ಸಹಿಸಿಕೊಳ್ಳೋದು ಕಷ್ಟ ಎಂದು ಭುಟ್ಟೋ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕ್ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ಬುಧವಾರ ಮಿಗ್ 21 ವಿಮಾನವನ್ನು ಗುರಿ ಇಟ್ಟು ಪಾಕ್ ದಾಳಿ ನಡೆಸಲು ಮುಂದಾದ ವೇಳೆ ಪೈಲಟ್ ಅಭಿನಂದನ್ ಸುರಕ್ಷಿತವಾಗಿ ಕೆಳಕ್ಕೆ ಹಾರಿದ್ದರು. ಆದರೆ ಅವರು ಗಡಿ ನಿಯಂತ್ರಣ ರೇಖೆಯೊಳಗೆ ಬಿದ್ದ ಪರಿಣಾಮ ಪಾಕಿಸ್ತಾನದ ಸೇನೆ ಅಭಿನಂದನ್ ಅವರನ್ನು ಬಂಧಿಸಿತ್ತು.

ಏತನ್ಮಧ್ಯೆ ಪೈಲಟ್ ಅಭಿನಂದನ್ ಅವರನ್ನು ಕೂಡಲೇ ಸುರಕ್ಷಿತವಾಗಿ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಡ ಹೇರಿದೆ. ಅಲ್ಲದೇ ಜಿನಿವಾ ಒಪ್ಪಂದದಂತೆ ಬಂಧಿಸಲ್ಪಟ್ಟ ಅಭಿನಂದನ್ ಅವರಿಗೆ ಕಿರುಕುಳ ನೀಡಬಾರದು ಎಂದು ತಾಕೀತು ಮಾಡಿದೆ.

Fatima Bhutto Seeks Release Of Indian Air Force Pilot Captured By Pak

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ