ಹೈದರಾಬಾದ್: ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್ಗೆ ಎಲ್ಲ ತಂಡಗಳು ಸಜ್ಜಾಗುತ್ತಿವೆ. ಟೀಂ ಇಂಡಿಯಾ ಕೂಡ ಹೊರತಾಗಿಲ್ಲ. ಇದೀಗ ವಿಶ್ವಕಪ್ ಮಹಾಸಮರಕ್ಕಾಗಿ ಟೀಂ ಇಂಡಿಯಾ ಪ್ಲೇಯರ್ಸ್ ಹಾಕಿಕೊಳ್ಳುವ ಹೊಸ ಜರ್ಸಿ ಮಾರ್ಚ್ 1ರಂದು ಅನಾವರಣಗೊಳ್ಳಲಿದೆ.
ಭಾರತ-ಆಸ್ಟ್ರೆಲಿಯಾ ನಡುವಿನ ಐದು ಏಕದಿನ ಪಂದ್ಯ ಆರಂಭಗೊಳ್ಳುವುದಕ್ಕೂ ಒಂದು ದಿನ ಮುಂಚಿತವಾಗಿ ಈ ಜರ್ಸಿ ಅನಾವರಣಗೊಳ್ಳಲಿದೆ. ವಿಶ್ವಕಪ್ ಆರಂಭಕ್ಕೂ ಒಂದು ತಿಂಗಳು ಮುಂಚಿತವಾಗಿ ಹೊಸ ಜರ್ಸಿ ಅನಾವರಣ ಮಾಡುತ್ತಿದ್ದು, ಏನೆಲ್ಲ ವಿಶೇಷತೆ ಇರಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ವಿಶ್ವಕಪ್ಗಾಗಿ ಟೀಂ ಇಂಡಿಯಾಗೆ ಅಂತಿಮ 15 ಆಟಗಾರರ ಆಯ್ಕೆ ಇನ್ನೂ ಆಗಿಲ್ಲ. ಇದರ ಮಧ್ಯೆ ಯಾರೆಲ್ಲ ಚಾನ್ಸ್ ಪಡೆದುಕೊಳ್ಳಬಹುದು ಎಂಬ ತವಕ ಕೂಡ ಕ್ರೀಡಾಭಿಮಾನಿಗಳಲ್ಲಿ ಶುರುವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆರ್ಭಟಿಸುವ ಆಟಗಾರರು ಇಂಗ್ಲೆಂಡ್ ಟಿಕೆಟ್ ಪಡೆದುಕೊಳ್ಳುವುದು ಮಾತ್ರ ಫಿಕ್ಸ್ ಎಂದು ಹೇಳಬಹುದು.