ಬೆಂಗಳೂರು, ಫೆ.27- ಸಿಟಿಜನ್ಸ್ ಫಾರ್ ಡೆಮಾಕ್ರಸಿ ವತಿಯಿಂದ ಪ್ರಜಾಪ್ರಭುತ್ವ ಬಿಕ್ಕಟ್ಟು ಮೂಲ ಕಾರಣಗಳು ಹಾಗೂ ಪರಿಹಾರ ಸಾಧ್ಯತೆಗಳು ಕುರಿತು ವಿಚಾರ ಮಂಥನ ಕಾರ್ಯಕ್ರಮ ಮಾ.17 ರಂದು ಧಾರವಾಡದ ವಿದ್ಯಾವರ್ಧಕ ಸಭಾಭವನದಲ್ಲಿ ನಡೆಯಲಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡೆಮಾಕ್ರಸಿಯ ಬಸವಪ್ರಭು ಹೊಸಕೇರಿ ದೇಶದಲ್ಲಿ ಭ್ರಷ್ಟಾಚಾರ ಎಂಬುದು ತಾಂಡವವಾಡುತ್ತಿದ್ದು ಅದನ್ನು ತೊಲಗಿಸುವಲ್ಲಿ ಸತತ ಪ್ರಯತ್ನ ಅನಿವಾರ್ಯವಾಗಿದ್ದು ರಾಜಕೀಯ ಪಕ್ಷಗಳು ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಭ್ರಷ್ಟಾಚಾರ ರಾಜಕೀಯ ಪಕ್ಷಗಳು ಅಧಿಕಾರ ವಹಿಸಿಕೊಳ್ಳುತ್ತಿವೆ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ಭ್ರಷ್ಟಾಚಾರ ಮುಕ್ತವಾದ ಪಕ್ಷವನ್ನು ಅಧಿಕಾರ ತರುವ ಪ್ರಯತ್ನ ಮಾಡಬೇಕಿದೆ ಎಂದರು.
ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಬೇಕಾಗಿದೆ. ಈ ಕಾರಣಗಳಿಂದ ಎರಡು ಪ್ರಕಾರದ ವಿಚಾರ ಮಂಥನ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.
ಸಭೆಯಲ್ಲಿ ಉಚ್ಛನ್ಯಾಯಾಲಯದ ನ್ಯಾ.ಎ.ಪಿ ಶಾಹ, ರಾಜಕೀಯ ಮುತ್ಸದಿ ಗೋಪಾಲ ಕೃಷ್ಣ ಗಾಂಧಿ, ಚಿಂತಕ ಯೋಗೇಂದ್ರ ಯಾದವ, ಸಾಹಿತಿ ದೇವನೂರು ಮಹಾದೇವ, ಪತ್ರಕರ್ತ ಸುಗತಾ ಶ್ರೀನಿವಾಸರಾಜು ಸೇರಿದಂತೆ ಮುಂತಾದವರು ತಮ್ಮ ಆಳವಾದ ಅರಿವನ್ನು ಅನುಭವವನ್ನು ಹಂಚಿಕೊಳ್ಳಲಿದ್ದು ರಾಜ್ಯದ ಬಹುತೇಕ ಜಿಲ್ಲೆಗಳಿಂದ ನೂರಾರು ಯುವಜನ ಮತ್ತು ಹಿರಿಯರು ಭಾಗವಹಿಸಲಿದ್ದಾರೆ ಎಂದರು.