ಭಾರತ ಮತ್ತು ಪಾಕ್ ನಡುವೆ ಯುದ್ಧ-ಎರಡನೇ ಮಹಾಸಂಗ್ರಾಮಕ್ಕಿಂತಲೂ ಭೀಕರ-ಪಾಕ್ ಸಚಿವ ರಷೀದ್ ಶೇಕ್ ಅಹಮ್ಮದ್

ಇಸ್ಲಮಾಬಾದ್, ಫೆ.27-ಮುಂದಿನ 72 ಗಂಟೆಗಳು ಅತ್ಯಂತ ಮಹತ್ವದ್ದಾಗಿದ್ದು, ಒಂದು ವೇಳೆ ಭಾರತ-ಪಾಕಿಸ್ತಾನ ನಡುವೆ ಯುದ್ಧವಾದರೆ ಅದು ಎರಡನೆ ಮಹಾಸಂಗ್ರಾಮಕ್ಕಿಂತಲೂ ಭೀಕರವಾಗಿರುತ್ತದೆ ಎಂದು ಪಾಕಿಸ್ತಾನದ ರೈಲ್ವೆ ಸಚಿವ ರಷೀದ್ ಶೇಕ್ ಅಹಮ್ಮದ್ ಹೇಳಿದ್ದಾರೆ.

ಯಾವುದೇ ಪರಿಸ್ಥಿತಿ ಎದುರಿಸಲು ಪಾಕಿಸ್ತಾನ ಸರ್ವಸನ್ನದ್ಧವಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಾಕಿಸ್ತಾನವು ದುರ್ಬಲವಲ್ಲ, ಅತ್ಯಂತ ಪ್ರಬಲ ಸೇನಾಪಡೆಗಳನ್ನು ಹೊಂದಿದೆ. ಭಾರತದ ಯಾವುದೇ ಸವಾಲುಗಳನ್ನು ಎದುರಿಸಲು ನಾವು ಶತಸಿದ್ಧ ಎಂದು ಸಚಿವರು ಕೊಚ್ಚಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ