ಬೆಂಗಳೂರು, ಫೆ.27- ಪಾಲಿಕೆ ಬಜೆಟ್ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಇಂದು ಸಭೆಯಲ್ಲಿ ಪ್ರಸ್ತಾಪ ಮಾಡಿದರು.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಮಾತ್ರ ಲ್ಯಾಪ್ಟಾಪ್ ಹಂಚಿಕೆ ಮಾಡಿದ್ದೀರ, ಉಳಿದ ಕ್ಷೇತ್ರಗಳಲ್ಲಿ ಏನು ಮಾಡಬೇಕು. ನಮ್ಮ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬಾರದಾ ಎಂದು ಪ್ರಶ್ನಿಸಿದರು.
ನಿಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದೀರ. ಬಿಬಿಎಂಪಿ ಆಬ್ಲಿಗೇಟೆಡ್ ಡ್ಯೂಟಿ ಮರೆತಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದೀರ. ಕೊಟ್ಟರೆ ಎಲ್ಲ ವಾರ್ಡ್ಗಳಿಗೂ ಲ್ಯಾಪ್ಟಾಪ್ ಕೊಡಿ ಎಂದು ಒತ್ತಾಯ ಮಾಡಿದರು.
ನಮ್ಮ ಅನುದಾನದಲ್ಲೇ ವಿದ್ಯಾರ್ಥಿಗಳ ಅವಶ್ಯಕತೆಗನುಗುಣವಾಗಿ ಲ್ಯಾಪ್ಟಾಪ್ಗಳನ್ನು ವಿತರಿಸಲಾಗಿದೆ ಎಂದು ಜೆಡಿಎಸ್ ನಾಯಕಿ ಸಮರ್ಥಿಸಿಕೊಂಡರು.