ಬೆಂಗಳೂರು, ಫೆ.27- ಬರ ಹಾಗೂ ಜಲಕ್ಷಾಮದಂತಹ ಗಂಭೀರ ಸಮಸ್ಯೆಗಳಿಂದ ಪಾರಾಗಲು ಸಮುದಾಯಗಳಿಗೆ ನೀರಿನ ಸ್ವಾಲಂಬನೆ, ನೀರಿನ ಮೂಲಗಳ ಸಂವರ್ಧನೆಯಂತಹ ಸುಧಾರಣಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಈ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗಲು ಜಲಾಮೃತ ಯೋಜನೆಗೆ ನಾಳೆ ಚಾಲನೆ ನೀಡಲಾಗುತ್ತಿದೆ.
ಬೆಳಿಗ್ಗೆ 10ಗಂಟೆಗೆ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯೋಜನೆಗೆ ಚಾಲನೆ ನೀಡಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಾಬೈರೇಗೌಡ ಅವರು ಭಾಗವಹಿಸಲಿದ್ದಾರೆ.
ಈ ಆಂದೋಲನದಲ್ಲಿ ಜಲ ಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಮತ್ತು ಸೃಜನೆ ಮುಖಾಂತರ ಜಲ ಸಂರಕ್ಷಣೆ, ಜಲ ಮಿತ ಬಳಕೆ ಮತ್ತು ಹಸರೀಕರಣ ಎಂಬ ನಾಲ್ಕು ಅಂಶಗಳನ್ನು ಒಳಗೊಂಡಿರುತ್ತದೆ.