ಭಾರತದ ದಾಳಿಗೆ ಪಾಕಿಸ್ತಾನ ತಕ್ಕ ಪ್ರತಿಕ್ರಿಯೆ ನೀಡುತ್ತದೆ: ಪಾಕ್ ವಿದೇಶಾಂಗ ಸಚಿವ ಶಾ ಮೊಹಮದ್‌ ಖುರೇಷಿ ಎಚ್ಚರಿಕೆ

ಇಸ್ಲಾಮಾಬಾದ್‌: ಭಾರತದ ದಾಳಿಗೆ ತಕ್ಕ ಉತ್ತರ ನೀಡಬೇಕಾಗುತ್ತದೆ. ಭಾರತೀಯ ವಾಯುಪಡೆಗಳು ನಡೆಸಿದ ದಾಳಿ ಅತಿಕ್ರಮಣ. ಇದಕ್ಕೆ ತಿರುಗೇಟು ನೀಡಬೇಕಾಗುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಸಚಿವ ಶಾ ಮೊಹಮದ್‌ ಖುರೇಷಿ ಎಚ್ಚರಿನೀಡಿದ್ದಾರೆ.

ಭಾರತೀಯ ವಾಯುಪಡೆಗಳ ದಾಳಿ ನಂತರ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ತುರ್ತು ಸಭೆ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಖುರೇಷಿ, ಇದು ಆಕ್ರಮಣ, ತಿರುಗಿ ಬೀಳುವ ಹಕ್ಕು ನಮಗಿದೆ ಎಂದು ತಿಳಿಸಿದರು.

ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತೀಯ ವಿಮಾನ ಗಡಿ ನಿಯಮ ಉಲ್ಲಂಘನೆ ಮಾಡಿದೆ. ಬಾಲಕೋಟ್‌, ಮುಜಫರಾಬಾದ್‌, ಚಕೋಟಿ ಎಂಬಲ್ಲಿ ಭಾರತೀಯ ವಾಯುಪಡೆಗಳು ದಾಳಿ ನಡೆಸಿದ್ದು ಆಕ್ರಮಣಕಾರಿ. ಇದಕ್ಕೆ ಪಾಕಿಸ್ತಾನ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ಗುಡುಗಿದ್ದಾರೆ.

ಮೊದಲು ಅತಿಕ್ರಮಣ ಮಾಡಿದ್ದು ಭಾರತ. ಇದು ಗಡಿ ನಿಯಂತ್ರಣ ರೇಖೆ ಹಾಗೂ ಕದನ ವಿರಾಮ ಉಲ್ಲಂಘನೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

India has committed an aggression and Islamabad has the right to respond: Pak Foreign Minister

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ