ಟೀಂ ಇಂಡಿಯಾ ಬ್ಯಾಟ್ಸಮನ್ ಗಳು ಎಡವಿದ್ದು ಎಲ್ಲಿ ಗೊತ್ತಾ ?

ಮೊನ್ನೆ ಆಸಿಸ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ  ಟೀಂ ಇಂಡಿಯಾ ಗೆಲ್ಲಬೇಕಾಗಿತ್ತು. ಆದರೆ ಮಾಡಿದ ಮೂರು ಮಿಸ್ಟೇಕ್ಗಳು . ಹಾಗಾದ್ರೆ ಬನ್ನಿ ಟೀಂ ಇಂಡಿಯಾ ಸೋಲಲು ಕಾರಣ ಏನು ಅನ್ನೋದನ್ನ ನೋಡೋಣ ಬನ್ನಿ

ನಂ. 1
ರಿಶಭ್ ಪಂತ್ ರನೌಟ್
ಮೊನ್ನೆ ವೈಜಾಗ್ ಅಂಗಳದಲ್ಲಿ ಆಸಿಸ್ ವಿರುದ್ಧ ಸೋಲಲು ಕಾರಣವಾಗಿದ್ದು ತಂಡದ ಬ್ಯಾಟ್ಸ್ಮನ್ಗಳು. ತಂಡಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿರಲಿಲ್ಲ. ಆದರೆ ಓಪನರ್ ಕೆ.ಎಲ್. ರಾಹುಲ್ ಮತ್ತು ಕ್ಯಾಪ್ಟನ್ ಕೊಹ್ಲಿ ಸಾಲಿಡ್ ಬ್ಯಾಟಿಂಗ್ ಮಾಡಿ ತಂಡದ ಸ್ಕೋರ್ ಹೆಚ್ಚಿಸಿದ್ರು.

69 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿತು. ಇಡೀ ಪಂದ್ಯಕ್ಕೆ ತಿರುವು ನೀಡಿದ್ದು ರಿಷಭ್ ಪಂತ್ ರನೌಟ್. ನಾಲ್ಕನೆ ಸ್ಲಾಟ್ನಲ್ಲಿ ಬಂದಿದ್ದ ರಿಷಭ್ ಪಂತ್ 3 ರನ್ಗಳಿಸಿದ್ದಾಗ ರನ್ ಕದಿಯಲು ಹೋಗಿ ರಿಷಭ್ ರನೌಟ್ ಖೆಡ್ಡಾಗೆ ಬಿದ್ರು.

ಈ ಡೆಲ್ಲಿ ಬ್ಯಾಟ್ಸ್ಮನ್ ಔಟ್ ಆಗುತ್ತಿದ್ದಂತೆ ನಂತರ ಬಂದ ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ ಬೇಗನೆ ಪೆವಿಲಿಯನ್ ಸೇರಿ ಅದಃಪತನದತ್ತ ಸಾಗಿತು. ಇದರ ಪರಿಣಾಮವೇ ಟೀಂ ಇಂಡಿಯಾ ಕೊನೆಯಲ್ಲಿ ತಿಣುಕಾಡಿ 7 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು.

ನಂ.2
ಸ್ಟ್ರೈಕ್ ರೋಟೇಟ್ ಮಾಡುವಲ್ಲಿ ಎಡವಿದ ಧೋನಿ
ಅದರಲ್ಲೂ ಹೊಡಿ ಬಡಿ ಆಟ ಟಿ20 ಫಾರ್ಮೆಟ್ನಲ್ಲಿ ಗೆಲುವು ಯಾರಿಗೆ ಸಿಗುತ್ತೆ ಎಂದು ಹೇಳೋದು ತುಂಬ ಕಷ್ಟ. ಇದಕ್ಕೆ ಮೊನ್ನೆ ವೈಜಾಗ್ ಅಂಗಳದಲ್ಲಿ ನಡೆದ ಪಂದ್ಯವೇ ಸಾಕ್ಷಿ .

100 ರನ್ಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಕ್ರಿಸ್ಗೆ ಬಂದ ಮಿಸ್ಟರ್ ಕೂಲ್ ಧೋನಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಬೇಕಿತ್ತು. ಆದರೆ ಧೋನಿ ರನ್ ಗಳಿಸಲು ತಿಣುಕಾಡಿದ್ರು. ಕೆಲವೊಂದು ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸಿದಾರಾದ್ರು ಅದು ಕೈಗೂಡಲಿಲ್ಲ.

ಕೊನೆಯವರೆಗೂ ಧೋನಿ ಕಾನ್ಫಿಡೆನ್ಸ್ನಲ್ಲಿದ್ರು ಗಳಿಸಿದ್ದು ಮಾತ್ರ ಒಂದು ಮತ್ತು ಎರಡು ರನ್ ಮಾತ್ರ ತೆಗೆಯುತ್ತಿದ್ರು.ಇದು ತಂಡ ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿತು. ಧೋನಿ ಮಾಡಿದ ಮತ್ತೊಂದು ದೊಡ್ಡ ತಪ್ಪೆಂದರೆ ಐoತಿeಡಿ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ಸ್ಟ್ರೈಕ್ ಬಿಟ್ಟುಕೊಡಲಿಲ್ಲ. ಒಂದು ವೇಳೆ ಸ್ಟ್ರೈಕ್ ಬಿಟ್ಟುಕೊಟ್ಟಿದ್ದಿದ್ದರೆ 15 ರನ್ ತಂಡಕ್ಕೆ ಸಿಗುತ್ತಿತ್ತು. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ನಂ. 3
ಕೊನೆಯಲ್ಲಿ ವಿಲನ್ ಆದ ಉಮೇಶ್ ಯಾದವ್
ಆ್ಯರಾನ್ ಫಿಂಚ್ ಪಡೆಗೆ 127 ರನ್ಗಳ ಸುಲಭ ಟಾರ್ಗೆಟ್ ನೀಡಿದ ಟೀಂ ಇಂಡಿಯಾ ಇನ್ನಿಲ್ಲದ ಹೋರಾಟ ನೀಡಿತು. ವೇಗಿ ಉಮೇಶ್ ಯಾದವ್ ಹೊರತು ಪಡಿಸಿ ತಂಡದ ಎಲ್ಲ ಬೌಲರ್ಸ್ಗಳು ಆಸಿಸ್ ಬ್ಯಾಟ್ಸ್ಮನ್ಗಳಿಗೆ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ಗೆ ಕಳುಹಿಸಿ ಗೆಲುವಿನ ಆಸೆಯನ್ನ ಚಿಗೊರೊಡೆಸಿದ್ರು. ಅದರಲ್ಲೂ ತಂಡದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ 19ನೇ ಓವರ್ನಲ್ಲಿ 2 ವಿಕೆಟ್ ಪಡೆದು ಕೇವಲ 2 ರನ್ ನೀಡಿ ತಂಡಕ್ಕೆ ಗೆಲ್ಲಲ್ಲು ಸುಲಭ ದಾರಿ ಮಾಡಿಕೊಟ್ಟಿದ್ರು.

ಆದರೆ ತಂಡಕ್ಕೆ ರಿಯಲ್ ವಿಲನ್ ಆಗಿದ್ದು ತಂಡದ ವೇಗಿ ಉಮೇಶ್ ಯಾದವ್. ಕೊನೆಯ ಓವರ್ನಲ್ಲಿ ಆಸ್ಟ್ರೇಲಿಯಾಕ್ಕೆ ಗೆಲ್ಲಲು 14 ರನ್ ಬೇಕಿತ್ತು. ಕ್ಯಾಪ್ಟನ್ ಕೊಹ್ಲಿ ಉಮೇಶ್ ಯಾದವ್ ಮೇಲೆ ಭರವಸೆ ಇಟ್ಟು ಚೆಂಡನ್ನ ಕೈಗೆ ಕೊಟ್ರು. ಆದರೆ ಉಮೇಶ್ ಯಾದವ್ ಎರಡು ಬೌಂಡರಿ ಸೇರಿ ಒಟ್ಟು 14 ರನ್ ಕೊಟ್ಟು ತಂಡದ ಸೋಲಿಗೆ ಕಾರಣರಾದ್ರು.

ಒಟ್ನಲ್ಲಿ ಮಾಡಿದ ಈ ಮೂರು ಮಿಸ್ಟೇಕ್ಸ್ಗಳು ಕೊಹ್ಲಿ ಪಡೆ ವೈಜಾಗ್ ಪಂದ್ಯವನ್ನ ಕೈಚೆಲ್ಲಿಕೊಳ್ಳುವಂತೆ ಮಾಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ