
ಬೆಂಗಳೂರು, ಫೆ. 26- ರೈಲಿಗೆ ಸಿಕ್ಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಂಟೊನ್ಮೆಂಟ್ ರೈಲ್ವೆ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಈತನ ಹೆಸರು, ವಿಳಾಸ ತಿಳಿದು ಬಂದಿಲ್ಲ.
ಕೆ.ಆರ್.ಪುರ-ಹೂಡಿರೈಲ್ವೆ ನಿಲ್ದಾಣದ ಮಧ್ಯೆಯಿರುವ ಡಿಸೇಲ್ ಸೆಟ್ ಸಮೀಪ ನಿನ್ನೆ ಮಧ್ಯಾಹ್ನ ಸುಮಾರು 30 ವರ್ಷದಂತೆ ಕಾಣುವ ಯುವಕ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.
ಈತನ ಜೇಬಿನಲ್ಲಿ ದೊರತಿರುವ ಚೀಟಿಯ ಪ್ರಕಾರಈತ ಬಿಹಾರ ಮೂಲದವರು ಎಂದು ತಿಳಿದು ಬಂದಿದೆ.ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇಡಲಾಗಿದೆ.
ವಾರಸುದಾರರು ಕಂಟೊನ್ಮೆಂಟ್ ರೈಲ್ವೆ ಪೊಲೀಸರನ್ನು ಸಂರ್ಪಕಿಸಲು ಕೋರಲಾಗಿದೆ.