ಬಡವರ ಬಂಧು ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು: ಸಚಿವ ಬಂಡಪ್ಪ ಕಾಶಂಪುರ

ಬೆಂಗಳೂರು, ಫೆ.25- ಬಡವರ ಬಂಧು ಯೋಜನೆಯಡಿ ಈಗಾಗಲೇ 18 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಲಾಗಿದ್ದು, ಮುಂದಿನ ವರ್ಷ ರಾಜ್ಯದ ಎಲ್ಲಾ ನಾಲ್ಕೂವರೆ ಲಕ್ಷ ಬೀದಿ ಬದಿ ವ್ಯಾಪಾರಿಗಳನ್ನು ಈ ಯೋಜನೆಯಡಿ ತರಲು ಉದ್ದೇಶಿಸಲಾಗಿದೆ ಎಂದು ಸಹಕಾರ ಸಚಿವ ಬಂಡಪ್ಪ ಕಾಶಂಪುರ ತಿಳಿಸಿದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡವರ ಬಂಧು ಯೋಜನೆಯಡಿ ಮಾರ್ಚ್ ಅಂತ್ಯಕ್ಕೆ ಸುಮಾರು 40ರಿಂದ 45 ಸಾವಿರ ವ್ಯಾಪಾರಿಗಳನ್ನು ತರುವ ನಿರೀಕ್ಷೆ ಇದೆ. ಮುಂದಿನ ವರ್ಷ ರಾಜ್ಯದ ಎಲ್ಲಾ ಜಿಲ್ಲೆಗಳ ನಾಲ್ಕೂವರೆ ಲಕ್ಷ ಬೀದಿ ಬದಿ ವ್ಯಾಪಾರಿಗಳನ್ನು ಯೋಜನೆ ವ್ಯಾಪ್ತಿಗೆ ತರಲು ಉದ್ದೇಶಿಸಿದ್ದು, ಸಾಲ ನೀಡಲು ಬ್ಯಾಂಕುಗಳಿಗೂ ಕೂಡ ಪ್ರೋತ್ಸಹ ನೀಡಲಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿರುವ 5ಸಾವಿರ ಬೀದಿ ಬದಿ ವ್ಯಾಪಾರಿಗಳನ್ನು ಈ ಯೋಜನೆಯಡಿ ತರುವ ಗುರಿ ಇದ್ದು, ಈಗಾಗಲೇ 2472 ಮಂದಿಗೆ ಪ್ರಯೋಜನ ದೊರೆತಿದೆ ಎಂದು ಹೇಳಿದರು.

ರೈತ ಕಣಜ:
ರೈತರ ಕೃಷಿ ಉತ್ಪನ್ನಗಳನ್ನು ಹೊಲದಿಂದ ಗೋದಾಮಿಗೆ ಸಾಗಿಸಲು ಉಚಿತ ಸಾರಿಗೆ ಮತ್ತು 8 ತಿಂಗಳವರೆಗೆ ಗೋದಾಮಿನಲ್ಲಿ ವೈಜ್ಞಾನಿಕವಾಗಿ ದಾಸ್ತಾನು ಮಾಡುವ ಅವಕಾಶ ಕಲ್ಪಿಸುವ ರೈತ ಕಣಜ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಬೆಲೆ ಕುಸಿತವಾದಾಗ ರೈತರು ಅಗ್ಗದ ದರದಲ್ಲಿ ಕೃಷಿ ಉತ್ಪನ್ನವನ್ನು ಮಾರಾಟ ಮಾಡುವ ಬದಲು ದಾಸ್ತಾನಿನಲ್ಲಿ ಸಂಗ್ರಹಿಸಿದ್ದ ಉತ್ಪನ್ನದ ಮೇಲೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಶೇ.70ರಿಂದ 80ರಷ್ಟು ಸಾಲ ಪಡೆಯುವ ಅವಕಾಶ ಕಲ್ಪಿಸಲಾಗುವುದು. ಬಡ್ಡಿ ಸಹಾಯ ಧನವನ್ನು ಇಂತಹ ರೈತರಿಗೆ ನೀಡಲಾಗುವುದು ಎಂದರು.

ರಾಜ್ಯದಲ್ಲಿ 20 ಲಕ್ಷ ಟನ್ ಕೃಷಿ ಉತ್ಪನ್ನ ದಾಸ್ತಾನು ಮಾಡುವ ಸಾಮಥ್ರ್ಯ ಹೊಂದಿರುವ ಗೋದಾಮುಗಳಿವೆ ಎಂದ ಅವರು, ಕೇಂದ್ರ ಸರ್ಕಾರದ ಘೋಷಣೆ ಮಾಡುವವರೆಗೂ ಕಾಯದೆ ವಿವಿಧ 12 ಬೆಳೆಗಳ ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ದಿನಾಂಕವನ್ನು ಏಪ್ರಿಲ್‍ನಲ್ಲೇ ಘೋಷಣೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ರೈತರು ತಮ್ಮ ಉತ್ಪನ್ನಗಳನ್ನು ಸಾಗಾಟ ಮಾಡಲು ಹೊಲದಿಂದಲೇ ದೂರವಾಣಿ ಕರೆ ಮಾಡಿದರೆ ಸಾಕು ಜಿಪಿಎಸ್ ಆಧಾರಿತ ಟ್ರ್ಯಾಕರ್‍ಗಳ ಮೂಲಕ ಹೊಲದಿಂದ ಗೋದಾಮಿಗೆ ಉಚಿತ ಸಾಗಾಣಿಕೆ ಮಾಡಲಾಗುತ್ತದೆ. ಅಲ್ಲದೆ, ಗೋದಾಮುಗಳಿಗೆ ಎಪಿಎಂಸಿ ಸ್ಥಾನಮಾನ ನೀಡಲಾಗಿದ್ದು, ಅಲ್ಲೇ ಮಾರಾಟ ಮಾಡುವ ಅವಕಾಶವೂ ರೈತರಿಗೆ ದೊರೆಯಲಿದೆ ಎಂದು ಹೇಳಿದರು.

11.36 ಕೋಟಿ ರೂ. ಸಾಲ ನೀಡಿಕೆ:
ಕಾಯಕ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಹಾಗೂ 5ರಿಂದ 10 ಲಕ್ಷವರೆಗೆ ಶೇ.4ರ ಬಡ್ಡಿ ದರದಲ್ಲಿ ರಾಜ್ಯದ 212 ಸ್ವ ಸಹಾಯ ಗುಂಪುಗಳಿಗೆ 11.36 ಕೋಟಿ ಸಾಲ ನೀಡಲಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.

ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಚಿನ್ನ ಅಡವಿಟ್ಟು ಪಡೆಯುವ ಸಾಲಕ್ಕೆ ಶೇ.3ರ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಅಲ್ಲದೆ, 500 ಕೋ ಅಪರೇಟಿವ್ ಫಾರ್ಮಿಂಗ್ ಸ್ಥಾಪಿಸಲು ರೂಪುರೇಷೆ ಸಿದ್ದಪಡಿಸಲಾಗುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ವರಿಷ್ಠರ ತೀರ್ಮಾನಕ್ಕೆ ಬದ್ಧ:

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ