ಕ್ಯಾಲಿಫೋರ್ನಿಯಾ: ವಿಶ್ವ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್ 2019ನೇ ಸಾಲಿನ ಪ್ರಶಸ್ತಿ ಪ್ರಕಟವಾಗಿದ್ದು ರೆಗಿನಾ ಕಿಂಗ್ ಅತ್ಯುತ್ತಮ ಪೋಷಕ ನಟಿಯಾಗಿ ಹೊರಹೊಮ್ಮಿದ್ದಾರೆ. 48 ವರ್ಷದ ರೆಗಿನಾ ”ಈಫ್ ಬೀಲ್ ಸ್ಟ್ರೀಟ್ ಕುಡ್ ಟಾಕ್ ”ಅಮೆರಿಕನ್ ಸಿನಿಮಾವಾಗಿದ್ದು, ಇದರಲ್ಲಿ ಮಗಳ ಸ್ನೇಹಿತನನ್ನು ಬೆಂಬಲಿಸುವ ತಾಯಿಯ ಪಾತ್ರದಲ್ಲಿ ಭಾವನಾತ್ಮಕವಾದಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.
ಕ್ಯಾಲಿಫೋರ್ನಿಯಾದ ಡೊಲ್ಬಿ ಥಿಯೇಟರ್ ನಲ್ಲಿ ಕಳೆದ ರಾತ್ರಿ ನಡೆದ 91ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೆಗಿನಾ ಕಿಂಗ್ ವರ್ಣರಂಜಿತ ಸಮಾರಂಭದಲ್ಲಿ ರೆಗಿನಾ ಕಿಂಗ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಮೂನ್ ಲೈಟ್ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಬ್ಯಾರಿ ಜೆಂಕಿನ್ಸ್ ಬೀಲ್ ಸ್ಟ್ರೀಟ್ ಕುಡ್ ಟಾಕ್ ಚಿತ್ರದ ನಿರ್ದೇಶಕರಾಗಿದ್ದು ಜೇಮ್ಸ್ ಬಾಲ್ಡ್ ವಿನ್ ಕಾದಂಬರಿ ಆಧಾರಿತ ಕಥೆಯಾಗಿದೆ. ಇಲ್ಲಿ ಟಿಶ್ ಮತ್ತು ಫಾನ್ನಿ ಯುವಕ-ಯುವತಿ ಪಾತ್ರದಲ್ಲಿ ಅಭಿನಯಿಸಿದ್ದು ಟಿಶಾಳ ತಾಯಿ ಪಾತ್ರ ಶರನ್ ನಲ್ಲಿ ರೆಗಿನಾ ಕಿಂಗ್ ಅಭಿನಯಕ್ಕೆ ಪ್ರೇಕ್ಷಕರು ಮಾರುಹೋಗಿದ್ದರು.