ಕೆ.ಎಲ್. ರಾಹುಲ್ ಮತ್ತೆ ಫಾರ್ಮ್ಗೆ ಮರಳಿದ್ದಾರೆ. ಆಸಿಸ್ ವಿರುದ್ಧ ಸಾಲಿಡ್ ಬ್ಯಾಟಿಂಗ್ ಮಾಡಿದ ರಾಹುಲ್ ಇಂಪ್ರೆಸ್ ಮಾಡಿದ್ರು.
ಕೆಲವು ತಿಂಗಳ ಹಿಂದೆ ಅವಕಾಶಗಳ ಅವಕಾಶ ಪಡೆದ್ರು ಬರೀ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು. ಕ್ರಿಕೆಟ್ನ ಮೂರು ಫಾರ್ಮೆಟ್ನಲ್ಲೂ ಫ್ಲಾಪ್ ಆಗಿದ್ದ ರಾಹುಲ್ ಆಸಿಸ್ ಸರಣಿ ವೇಳೆ ಟಿವಿ ಟಾಕ್ ಶೋನಿಲ್ಲಿ ಅಸಭ್ಯವಾಗಿ ಮಾತನಾಡಿ ಸಾರ್ವಜನಿಕ ವಲಯದಿಂದ ಭಾರೀ ಟೀಕೆಗಳಿಗೆ ಗುರಿಯಾಗಿ ಬಸಿಸಿಐನಿಂದ ಅಮಾನತು ಶಿಕ್ಷಗೆ ಗುರಿಯಾಗಿದ್ರು.
ಇಂಡಿಯಾ ಎ ಮೂಲಕ ಮಿಂಚಿದ ರಾಹುಲ್
ಕೆಲವು ದಿನಗಳ ನಂತರ ರಾಹುಲ್ ಮೇಲಿದ್ದ ಅಮಾನತು ಶಿಕ್ಷೆಯನ್ನ ಬಿಸಿಸಿಐ ಹಿಂತೆಗೆದುಕೊಂಡಿತು. ಇಂಗ್ಲೆಂಡ್ ಲೈಯನ್ಸ್ ವಿರುದ್ಧದ ಸರಣಿಗೆ ಆಯ್ಕೆಯಾದ ರಾಹುಲ್ ಸಾಲಿಡ್ ಪರ್ಫಾಮನ್ಸ್ ಕೊಟ್ಟಿದ್ರು. ಈ ಪರ್ಫಾಮನ್ಸ್ ರಾಹುಲ್ಗೆ ತವರಿನಲ್ಲಿ ನಡೆಯುವ ಆಸಿಸ್ಗೆ ಸರಣಿಗೆ ಆಯ್ಕೆಯಾಗುವಂತೆ ಮಾಡಿತು.
ತಂಡಕ್ಕೆ ಗ್ರೇಟ್ ಕಮ್ಬ್ಯಾಕ್ ಮಾಡಿದ ಡ್ಯಾಶಿಂಗ್ ಓಪನರ್
ನಿನ್ನೆ ವಿಶಾಖಪಟ್ಟಣ ಅಂಗಳದಲ್ಲಿ ರೋಹಿತ್ ಜೊತೆ ಕಣಕ್ಕಿಳಿದ ರಾಹುಲ್ ಆರಂಭದಲ್ಲಿ Sಟoತಿ ಂಟಿಜ Sಣeಚಿಜಥಿ ಇನ್ನಿಂಗ್ಸ್ ಕಟ್ಟಿಕೊಟ್ರು. ಕ್ಯಾಪ್ಟನ್ ಕೊಹ್ಲಿ ಜೊತೆ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿದ ರಾಹುಲ್ ಆಸೀಸ್ ಬೌಲರ್ಸ್ ಗಳನ್ನ ಮನಬಂದಂತೆ ಚೆಂಡಾಡಿ ತಂಡದ ಸ್ಕೋರ್ ಹೆಚ್ಚಿಸಿದ್ರು.
ಐದನೇ ಅರ್ಧ ಶತಕ ಬಾರಿಸಿದ ಕನ್ನಡಿಗ ರಾಹುಲ್
ವಿರಾಟ್ ಕೊಹ್ಲಿ ನಂತರ ಧೋನಿಯೊಂದಿಗೆ ಆಡಿದ ಕೆ.ಎಲ್. ರಾಹುಲ್ 35ನೇ ಎಸೆತದಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದ್ರು. ಇದರೋಂದಿಗೆ ರಾಹುಲ್ ಟಿ20 ಕ್ರಿಕೆಟ್ನಲ್ಲಿ ಐದನೇ ಅರ್ಧ ಶತಕ ಬಾರಿಸಿ ಶೈನ್ ಆದ್ರು…
ಅರ್ಧ ಶತಕ ಬಾರಿಸಿದ ಕೆ.ಎಲ್. ರಾಹುಲ್
ಎಸೆತ – 36
ರನ್ – 50
4/6 – 6/1
ಸ್ಟ್ರೈಕ್ ರೇಟ್ : 138.88
ಅಬ್ಬರದ ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆ.ಎಲ್. ರಾಹುಲ್ 36 ಎಸೆತಗಳನ್ನ ಎದುರಿಸಿ 50 ರನ್ ಗಳಿಸಿದ್ರು. ಇದರಲ್ಲಿ 6 ಬೌಂಡರಿ 1 ಸಿಕ್ಸರ್ ಒಳಗೊಂಡು 138.88 ಸ್ಟ್ರೈಕ್ ರೇಟ್ ಪಡೆದ್ರು.
ಈ ವೀರಿ ಕನ್ನಡಿಗನ ಬ್ಯಾಟಿಂಗ್ ಅಬ್ಬರ ಹೇಗಿತ್ತೆಂದ್ರೆ 9ನೇ ಓವರ್ನಲ್ಲಿ ಆ್ಯಡಾಮ್ ಜಾಂಪಾ ಎಸೆದ ಗೂಗ್ಲಿ ಎಸೆತವನ್ನ ರಾಹುಲ್ ಸ್ಟೇಡಿಯಂನಿಂದ ಹೊರಗೆ ಬಾರಿಸಿ ತಮ್ಮ ತಾಕತ್ತು ತೋರಿಸಿದ್ರು..
ಒಟ್ಟಾರೆ ಕನ್ನಡಿಗೆ ಕೆ.ಎಲ್. ರಾಹುಲ್ ಕಾಂಗರೂಗಳ ವಿರುದ್ಧ ಅರ್ಧ ಶತಕ ಬಾರಿಸಿ ಗ್ರೇಟ್ ಕಮ್ಬ್ಯಾಕ್ ಮಾಡಿ ವಿಶ್ವಕಪ್ನಲ್ಲಿ ನಾನು ಆಡಲು ರೆಡಿ ಎಂಬ ಸೂಚನೆ ಕೊಟ್ಟಿದ್ದಾರೆ.