ಲಾಸ್ ಏಂಜಲೀಸ್: 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಪೀಟರ್ ಫರೇನಿ ನಿರ್ದೇಶನದ ಗ್ರೀನ್ ಬುಕ್ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗಳಿಸಿದೆ.
ಲಾಸ್ ಏಂಜಲೀಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರೀನ್ ಬುಕ್ ಸಿನಿಮಾಗೆ ಆಸ್ಕರ್ ಗೌರವ ನೀಡಲಾಯಿತು.ಈ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ರೋಮಾ ಮತ್ತು ದಿ ಫೇವರಿಟ್ ಚಿತ್ರಗಳು ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ – ಭಾರತದ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಋತುಶ್ರಾವ ಕುರಿತ ‘ಪಿರಡ್, ಎಂಡ್ ಆಫ್ ಸೆಂಟೆನ್ಸ್’ ಸಾಕ್ಷ್ಯಚಿತ್ರ 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ.
ರೋಮಾ ಚಿತ್ರಕ್ಕಾಗಿ ಆಲ್ಫಾನ್ಸೊ ಕ್ಯೂರನ್ ಅವರು ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ, ದಿ ಫೇವರಿಟ್ ಸಿನಿಮಾಗಾಗಿ ಒಲಿವಿಯಾ ಕೊಲ್ಮನ್ ಅವರು ಉತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇನ್ನು ಬೊಹಿಮೆನ್ ರಾಪ್ಸೊಡಿ ಸಿನಿಮಾಗಾಗಿ ರಮಿ ಮಾಲಿಕ್ ಅವರು ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ಪಟ್ಟಿ ಇಂತಿದೆ:
ಪೀಟರ್ ಫರೇನಿ ನಿರ್ದೇಶನದ ಗ್ರೀನ್ ಬುಕ್-ಅತ್ಯುತ್ತಮ ಚಿತ್ರ-
ಅಲ್ಫೋನ್ಸೊ ಕ್ಯುರೋನ್ ರೋಮಾ ಚಿತ್ರಕ್ಕಾಗಿ- ಅತ್ಯುತ್ತಮ ನಿರ್ದೇಶಕ
ದಿ ಫೇವರಿಟ್ ಚಿತ್ರಕ್ಕೆ ಒಲಿವಿಯಾ ಕಾಲ್ ಮ್ಯಾನ್-ಉತ್ತಮ ನಟಿ
ರಾಮಿ ಮಲಿಕ್- ಬೊಹೆಮಿಯನ್ ರಫ್ಸೊಡಿ ಚಿತ್ರ -ಉತ್ತಮ ನಟ-
ಮಹೆರ್ಷಲಾ ಆಲಿ- ಗ್ರೀನ್ ಬುಕ್ ಚಿತ್ರ-ಅತ್ಯುತ್ತಮ ಪೋಷಕ ನಟ
ಅತ್ಯುತ್ತಮ ಪೋಷಕ ನಟಿ-ರೆಗಿನಾ ಕಿಂಗ್
ಅತ್ಯುತ್ತಮ ವಿದೇಶಿ ಚಿತ್ರ, ಛಾಯಾಗ್ರಹಣ-ರೋಮಾ(ಮೆಕ್ಸಿಕೊ)
ಅತ್ಯುತ್ತಮ ಅನಿಮೇಟೆಡ್ ಫ್ಯೂಚರ್ ಚಿತ್ರ-ಸ್ಪೈಡರ್ ಮ್ಯಾನ್: ಇನ್ ಟೂ ದ ಸ್ಪೈಡರ್ ವರ್ಸ್
ಅತ್ಯುತ್ತಮ ಮೂಲ ಚಿತ್ರಕಥೆ-ಬ್ಲಾಕ್ ಪ್ಯಾಂಥರ್
ಅತ್ಯುತ್ತಮ ಗೀತೆ-ಶ್ಯಾಲ್ಲೊ, ಎ ಸ್ಟಾರ್ ಈಸ್ ಬಾರ್ನ್ ಚಿತ್ರಕ್ಕೆ
ಉತ್ತಮ ವಿಶಿಷ್ಟ ಸಾಕ್ಷ್ಯಚಿತ್ರ- ಫ್ರೀ ಸೊಲೊ
ಅತ್ಯುತ್ತಮ ಮೂಲ ಗೀತೆ -ಲೇಡಿ ಗಾಗಾ, ಮಾರ್ಕ್ ರಾಮ್ ಸನ್, ಆ್ಯಂಟನಿ ರೊಸ್ಸಾಮಾಂಡೊ, ಆಂಡ್ರ್ಯೂ ವ್ಯಾಟ್
ಮೂಲ ಕಥೆ-ನಿಕ್ ವೆಲ್ಲೆಲಾಂಗ್, ಬ್ರಯಾನ್ ಕ್ಯೂರಿ, ಪೀಟರ್ ಫಾರೆಲ್ಲಿ ಗ್ರೀನ್ ಬುಕ್ ಚಿತ್ರಕ್ಕೆ,
ಉತ್ತಮ ಛಾಯಾಗ್ರಹಣ-ರೊಮಾ ಚಿತ್ರಕ್ಕೆ ಅಲ್ಫೊನ್ಸೊ ಕ್ಯೂರಾನ್
ಉತ್ತಮ ನಿರ್ಮಾಣ ವಿನ್ಯಾಸ-ಬ್ಲಾಕ್ ಪ್ಯಾಂಥರ್
ಉತ್ತಮ ವಸ್ತ್ರ ವಿನ್ಯಾಸ-ಬ್ಲಾಕ್ ಪ್ಯಾಂಥರ್
ಉತ್ತಮ ಧ್ವನಿ ಸಂಕಲನ -ಬೊಹೆಮಿಯನ್ ರಫ್ಸೊಡಿ ಚಿತ್ರ
ಉತ್ತಮ ಸಂಕಲನ-ಬೊಹೆಮಿಯನ್ ರಫ್ಸೊಡಿ
ಉತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ-ವೈಸ್
Green Book wins Oscar for best picture