ರಾಂಚಿ: ಝಾರಖಂಡ್ ನ ಗುಮ್ಲಾದಲ್ಲಿ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಪೀಪಲ್ಸ್ ಲಿಬರೇಷನ್ ಫ್ರಂಟ್ ಆಫ್ ಇಂಡಿಯಾ(ಪಿಎಲ್ ಎಫ್ ಐ) ಉಗ್ರರು ಬಲಿಯಾಗಿದ್ದಾರೆ.
ಗುಮ್ಲಾ ಜಿಲ್ಲೆಯ ಕಾಮ್ದಾರ ಪ್ರದೇಶದಲ್ಲಿ ಸಿಆರ್ಪಿಎಫ್ನ ಕೋಬ್ರಾ ಪಡೆಯ ಸಿಬ್ಬಂದಿಯಿಂದ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರು ಬಲಿಯಾಗಿದ್ದು, ಮೃತ ಉಗ್ರರಿಂದ ಪೊಲೀಸರು ಎರಡು ಎಕೆ 47 ರೈಫಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಖಚಿತ ಮಾಹಿತಿ ನೀಡಿದ ಪೊಲೀಸ್ ಹೆಚ್ಚುವರಿ ಡೈರೆಕ್ಟರ್ ಜನರಲ್ ಎಂ ಎಲ್ ಮೀನಾ, ಎನ್ಕೌಂಟರ್ನಲ್ಲಿ ಮೂವರು ಬಲಿಯಾಗಿದ್ದಾರೆ. ಎನ್ಕೌಂಟರ್ ನಡೆದ ಸ್ಥಳದಿಂದ ಎರಡು ಎಕೆ 47 ರೈಫಲ್ ಮತ್ತು .315 ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
3 PLFI Ultras Killed in Encounter With Security Forces in Jharkhand’s Gumla District