ಇಬ್ಬರು ಪಾಕಿಸ್ತಾನ ಅಥ್ಲೀಟ್ಗಳಿಗೆ ಭಾರತ ಸರ್ಕಾರ ವೀಸಾ ನಿರಾಕರಿಸಿದ್ದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಕಂಗೆಣ್ಣಿಗೆ ಗುರಿಯಾಗಿದೆ.
ಕಳೆದ ವಾರ ಪುಲ್ವಾಮ ದಾಳಿ ಹಿನ್ನಲೆಯಲ್ಲಿ ಇಡೀ ದೇಶ ಪಾಕಿಸ್ತಾನ ವಿರುದ್ಧ ಎಲ್ಲ ಸಂಬಂಧಗಳನ್ನ ಕಳೆದುಕೊಂಡಿತ್ತು. ಇದಕ್ಕೆ ಕ್ರೀಡೆಯೂ ಹೊರತಾಗಿರಲ್ಲಿಲ್ಲ.
ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ನಡೆಯುತ್ತಿತ್ತು. ವಿಶ್ವಕಪ್ ಆಡಲು ಎಲ್ಲ ರಾಷ್ಟ್ರಗಳಿಂದ ಶೂಟರ್ಗಳು ಆಗಮಿಸಿದ್ದರು.
ಆದರೆ ಪಾಕಿಸ್ತಾನದ ಶೂಟರ್ಗಳಿಗೆ ವೀಸಾ ಸಮಸ್ಯೆಯಾಗಿತ್ತು. ಪಾಕ್ನ ಶೂಟರ್ಗಳಿಗೆ ಕೇಂದ್ರ ಸರ್ಕಾರ ವೀಸಾವನ್ನ ನಿರಾಕರಿಸಿತ್ತು.
ಇದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಗಮನಕ್ಕೆ ಬಂದು ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯೊಂದಿಗೆ ಮತ್ತು ಸರ್ಕಾರದೊಂದಿಗೆ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಭಾರತದೊಂದಿಗೆ ಮಾತನಾಡದಿರಲು ನಿರ್ಧರಿಸಿದ್ದು ಆತಿಥ್ಯದ ಹಕ್ಕನ್ನ ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.