ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರಿಗೆ ಡಿಕ್ಕಿ ಟಾಟಾ ಏಸ್ ವಾಹನ: ಸ್ಥಳದಲ್ಲೇ ಮೃತ ಪಟ್ಟ ವೃದ್ಧ

ಬೆಂಗಳೂರು, ಫೆ.22- ರಸ್ತೆದಾಟುತ್ತಿದ್ದ ವೃದ್ದರೊಬ್ಬರಿಗೆ ಅತಿವೇಗವಾಗಿ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮಅವರು ಸಾವನ್ನಪ್ಪಿರುವ ಘಟನೆ ಬಾಣಸವಾಡಿ ಸಂಚಾರಿ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಬಾಣಸವಾಡಿ ನಿವಾಸಿ ಹನುಮಪ್ಪ (68) ಮೃತಪಟ್ಟ ವೃದ್ಧ.

ಬಾಣಸವಾಡಿ ಮುಖ್ಯರಸ್ತೆಯಅಗ್ನಿ ಶಾಮಕ ಠಾಣೆ ಸಮೀಪ ರಾತ್ರಿ 9.30ರ ಸಮಯದಲ್ಲಿ ಹನುಮಪ್ಪ ರಸ್ತೆದಾಟುತ್ತಿದ್ದಾಗ ವೇಗವಾಗಿ ಮುನ್ನುಗ್ಗಿ ಬಂದ ಟಾಟಾಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಬಗ್ಗೆ ಬಾಣಸವಾಡಿ ಸಂಚಾರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ