ಮುಂಬೈ: ಪುಲ್ವಾಮಾ ಉಗ್ರರ ದಾಳಿ ಕುರಿತು ಹೇಳಿಕೆ ನೀಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಎಲ್ಲಾ ಸಮಸ್ಯೆಗಳು ಮಾತುಕತೆಯಿಂದಲೆ ಬಗೆಹರಿಯುತ್ತವೆ ಎಂದಾದರೆ, ನೀವು 3 ಮದುವೆಯಾಗುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಹೇಳಿಕೆಗೆ ಸರಣಿ ಟ್ವೀಟ್ ಮಾಡಿರುವ ನಿರ್ದೇಶಕ ಆರ್ ಜಿವಿ, ಎಲ್ಲಾ ಸಮಸ್ಯೆಗಳು ಮಾತುಕತೆಯಿಂದ ಬಗೆಹರಿಯುವುದಾದರೇ ನೀವು 3ನೇ ಮದುವೆಯಾಗುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಬುದ್ದಿಯಿಲ್ಲದ ನಮ್ಮೆಡೆಗೆ ಆರ್ಡಿಎಕ್ಸ್ ಹಿಡಿದು ಬರುತ್ತಿರುವ ವ್ಯಕ್ತಿಯೊಂದಿಗೆ ಹೇಗೆ ಮಾತುಕತೆ ನಡೆಸಬೇಕು ಎಂಬುದನ್ನು ನೀವು ದಯವಿಟ್ಟು ತಿಳಿಸಿಕೊಡಿ. ಚಿಂತಿಸಬೇಡಿ ನಾವು ನಿಮಗೆ ಟ್ಯೂಷನ್ ಫೀಯನ್ನೂ ನೀಡುತ್ತೇವೆ. ನಿಮ್ಮ ದೇಶದಲ್ಲಿ ಯಾರಿದ್ದಾರೆ ಎಂಬುವುದೇ ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಉಗ್ರ ಸಂಘಟನೆಗಳಾದ ಜೈಶ್ ಇ ಮೊಹಮದ್, ಲಷ್ಕರ್ ಎ ತೋಯಿಬಾ, ತಾಲಿಬಾನ್, ಅಲ್ ಕೈದಾ ಸಂಘಟನೆಗಳು ಪಾಕಿಸ್ತಾನದಲ್ಲಿ ಅಶ್ರಯ ಪಡೆದಿದೆ. ಈ ಬಗ್ಗೆ ಒಮ್ಮೆಯೂ ನೀವು ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ ಉಗ್ರರು ಇಲ್ಲ ಎನ್ನುವ ಹೇಳಿಕೆಯನ್ನೇ ನೀಡಿಲ್ಲ ಏಕೆ ಎಂದು ಕೇಳಿದ್ದಾರೆ.
Ram Gopal Varma slams Pak PM Imran Khan, says, ‘If dialogue could solve problem why 3 marriages?