ಜನಾಕರ್ಷಣೆಯ ಕೇಂದ್ರ ಪ್ರಯಾಗದಲ್ಲಿ” ನೇತ್ರ ಕುಂಭ.”

ಜನಾಕರ್ಷಣೆಯ ಕೇಂದ್ರ ಪ್ರಯಾಗದಲ್ಲಿ” ನೇತ್ರ ಕುಂಭ.” ಜನವರಿ 12 ವಿವೇಕಾನಂದ ಜಯಂತಿ ಯಿಂದ ಆರಂಭಗೊಂಡು ತಿಂಗಳುಗಳ ಕಾಲ ದಿಂದ ನಿರಂತರ ವಾಗಿ ಸೇವೆ, ಚಿಕಿತ್ಸೆ ,ತಪಾಸಣೆ ಉಚಿತವಾಗಿ ,ಕನ್ನಡಕ ವಿತರಣೆ ಇದು ಪ್ರಯಾಗದಲ್ಲಿ ವಿಶೇಷ ಚೇತನರ ಅಖಿಲ ಭಾರತ ಸಂಘಟನೆ ಸಕ್ಷಮ ದಿಂದ ನಡೆಯುತಿರುವ ಲೋಕಪ್ರಿಯ ಕಾರ್ಯದ ವರದಿ ಈಗಾಗಲೇ ಲಕ್ಷಕ್ಕೂ ಹೆಚ್ಚು ಜನರಿಗೆ ತಪಾಸಣೆ ಆಪರೇಷನ್ ಉಚಿತ ಕನ್ನಡಕ ವಿತರಣೆ ನಡೆಸಲಾಗಿದೆ. ಏಳು ಕೋಟಿಗೂ ಹೆಚ್ಚು ಜನರು ಪ್ರಯಾಗದ ಕುಂಭಮೇಳದಲ್ಲಿ ಈಗಾಗಲೇ ಭೇಟಿ ನೀಡಿದ್ದಾರೆ .ಆ ಪೈಕಿ ಹೆಚ್ಚು ಜನ ಸಂದಣಿಯ ಕೇಂದ್ರವಾಗಿ ಸುಸಜ್ಜಿತ ತಾತ್ಕಾಲಿಕ ಆಸ್ಪತ್ರೆಯನ್ನು ಹೊಂದಿರುವ ಸಕ್ಷಮ ದ 5:30 ಕಿಲೋಮೀಟರ್ ವ್ಯಾಪ್ತಿಯಲ್ಲಿ ವ್ಯವಸ್ಥಿತವಾದ ಕಾರ್ಯವನ್ನು ನಡೆಸುತ್ತಿದ್ದಾರೆ.

                            

ಅನುಭವಿ ನೇತ್ರ ಚಿಕಿತ್ಸಾಕ ಡಾಕ್ಟರ್ ಗಳು ಸರದಿಯಂತೆ ನಾಲ್ಕು ದಿನಗಳ ಸಮಯವನ್ನು ಕೊಟ್ಟು ಶಸ್ತ್ರಚಿಕಿತ್ಸೆಯ ಸೇವೆಯನ್ನು ಒದಗಿಸಿದ್ದಾರೆ ದೇಶದ ಬಹುತೇಕ ಎಲ್ಲ ರಾಜ್ಯಗಳ ವೈದ್ಯರು ಸರಿ ಸುಮಾರು ನಾಲ್ಕುನೂರು ಜನ ಸರದಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ . ಸಕ್ಷಮ ದ ಅಖಿಲ ಭಾರತ ಕಾರ್ಯಕಾರಿಣಿ 16 17 18 ರಂದು ನಡೆಯುತ್ತಿದೆ ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ ಮತ್ತು ಅಂಧತ್ವ ಮುಕ್ತ ಭಾರತ ಯೋಜನೆ ಅಡಿಯಲ್ಲಿ ಭಾರತ ಸರ್ಕಾರ ಉತ್ತರಪ್ರದೇಶ ಸರಕಾರ ಸು ಯೋಗ್ಯ ಸಹಯೋಗವನ್ನು ನೀಡಿದೆ. ಪಾಳಿ ಗಾಗಿ ಕಾಯುತ್ತಿರುವ ಜನತೆಯ ವಿಸ್ತಾರ ಕಿಲೋಮೀಟರು ದೂರದವರೆಗೂ ವ್ಯಾಪಿಸುತ್ತಿದೆ . ಬೆಳಿಗ್ಗೆ ಐದು ಗಂಟೆಯಿಂದಲೇ ಆರಂಭವಾಗುವ ಚಿಕಿತ್ಸಾ ಅಪೇಕ್ಷಿತ ರ ಒತ್ತಡವನ್ನು ಪೊಲೀಸರು ಸ್ವಯಂ ಸೇವಕರು ,ಜನರನ್ನು ನಿಯಂತ್ರಿ ಸಲು ಬಹಳ ಸಂಯಮದಿಂದಲೇ ಕೆಲಸ ಮಾಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ